ಯಾದಗಿರಿ: ಮುಕ್ಕಣ್ಣ ಕರಿಗಾರ ಅವರ’ ಶಿವತತ್ವ ಚಿಂತನೆ’ ಕೃತಿ ಲೋಕಾರ್ಪಣೆ

ಯಾದಗಿರಿ ,ಸೆ17 ;

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಂದು ಯಾದಗಿರಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರ ಇತ್ತೀಚಿನ ಕೃತಿ ‘ ಶಿವತತ್ವ ಚಿಂತನೆ’ ಯನ್ನು ವಿಶಿಷ್ಟವಾಗಿ ಲೋಕಾರ್ಪಣೆಗೊಳಿಸಲಾಯಿತು.ಉಪಕಾರ್ಯದರ್ಶಿಯವರ ಸರಕಾರಿ ವಸತಿಗೃಹ ಕವಿಮನೆ ‘ ವಿಂಧ್ಯಾದ್ರಿ’ ಯ ಅಂಗಳದಲ್ಲಿ ಮುಕ್ಕಣ್ಣ ಕರಿಗಾರ ಅವರ ಮಗಳು ಕುಮಾರಿ ವಿಂಧ್ಯಾ ಮುಕ್ಕಣ್ಣ ಕರಿಗಾರ ‘ ಶಿವತತ್ತ್ವ ಚಿಂತನೆ’ ಯನ್ನು ಲೋಕಾರ್ಪಣೆಗೊಳಿದರು.ವಿಂಧ್ಯಾದ್ರಿಯ ಅಂಗಳದ ಈ ಸರಳ ಕಾರ್ಯಕ್ರಮ ಕನ್ನಡ ಸಾಹಿತ್ಯ ಲೋಕದಲ್ಲೊಂದು ಹೊಸತೆನಿಪ ಕಾರ್ಯಕ್ರಮ.ಎರಡುವರೆ ವರ್ಷದ ಕಂದಮ್ಮನಿಂದ ಪುಸ್ತಕ ಲೋಕಾರ್ಪಣೆಗೊಳಿಸಿದ್ದು ವಿಶೇಷವಾಗಿತ್ತು.

ಲೇಖಕ ಮುಕ್ಕಣ್ಣ ಕರಿಗಾರ ಯಾದಗಿರಿ ಜಿಲ್ಲಾ ಪಂಚಾಯತಿ ಅಧಿಕಾರಿಗಳು,ಸಿಬ್ಬಂದಿಯವರುಗಳಾದ ಎಡಿಪಿಸಿ ಬನ್ನಪ್ಪ,ಅಧೀಕ್ಷಕರುಗಳಾದ ಈರಯ್ಯ,ಅಶೋಕ ಕಲಾಲ್,ಮಲ್ಲಿಕಾರ್ಜುನ ಮುಂಡ್ರಕೇರಿ,ಬಸವಲಿಂಗ,ಕಂಟೆಪ್ಪ,ವೆಂಕಟೇಶ ಪವಾರ್,ಬಸವರಾಜ,ಅನಿಲ್ ಹಾಸಗೊಂಡ,ಶಿವು,ರವಿ ಮೊದಲಾದವರು ಪಾಲ್ಗೊಂಡಿದ್ದರು.

‘ ಶಿವತತ್ವ ಚಿಂತನೆ’ ಯು ಇಪ್ಪತ್ತೈದು ಶಿವಚಿಂತನೆಗಳನ್ನು ಒಳಗೊಂಡ ಚಿಂತನೆಗಳ ಸಂಕಲನವಾಗಿದ್ದು ಮುಕ್ಕಣ್ಣ ಕರಿಗಾರ ಅವರ ೪೪ ನೆಯ ಕೃತಿ.ಬೆಂಗಳೂರಿನ ಮಹಾಶೈವ ಪ್ರಕಾಶನವು ಪುಸ್ತಕವನ್ನು ಪ್ರಕಟಿಸಿದ್ದರೆ ಯಂತ್ರೋದ್ಧಾರಕ ಪ್ರಿಂಟರ್ಸ್ ಪುಸ್ತಕದ ಮುದ್ರಣ ಮಾಡಿದ್ದಾರೆ. 80 ಜಿ ಎಸ್ ಎಮ್ ಎನ್ ಎಸ್ ಲೈಟ್ ವೇಟ್ ಕಾಗದವನ್ನು ಬಳಸಿ ಮುದ್ರಿಸಿದ 110 ಪುಟಗಳ ಪುಸ್ಯಕದ ಬೆಲೆ 200 ರೂಪಾಯಿಗಳು.