ಕಥೆಗಾರ ಲಕ್ಷ್ಮಣ ಬಾದಾಮಿಗೆ ಅಕಾಡೆಮಿ ಪ್ರಶಸ್ತಿ

ಸಿರವಾರ:

ಸಿರವಾರ ತಾಲೂಕಿನ ಕುರುಕುಂದ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಹಾಗೂ ಕಥೆಗಾರ ಲಕ್ಷ್ಮಣ ಬಾದಾಮಿಯಯವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವನ್ನು ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿತರಿಸಲಾಯಿತು. ೨೦೧೯ನೇ ಸಾಲಿನ ಕಥಾ ಸಂಕಲನ ವಿಭಾಗದಲ್ಲಿ ಇವರ “ಒಂದು ಚಿಟಿಕೆ ಮಣ್ಣು” ಕೃತಿ ಬಹುಮಾನಕ್ಕೆ ಆಯ್ಕೆಯಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನಿಲಕುಮಾರವರು ಬಹುಮಾನ ನೀಡಿದರು. ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ಸಂಸದ ತೇಜಸ್ವಿ ಸೂರ್ಯ, ಅಕಾಡೆಮಿಯ ಅಧ್ಯಕ್ಷರಾದ ಬಿ. ವಿ. ವಸಂತಕುಮಾರ,ರಜಿಸ್ಟ್ರಾರ್ ಕರಿಯಪ್ಪ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಬಾದಾಮಿಯರ ಕೃತಿಗೆ ಬಹುಮಾನ ದೊರೆತಿರುವುದರಿಂದ ಮುಖ್ಯೋಪಾಧ್ಯಾಯ ನಾಗಲಿಂಗಪ್ಪ ಮತ್ತು ಸಿಬ್ಬಂದಿ ಹಾಗೂ ಎಸ್.ಡಿ.ಎಂ ಸಿ. ಬಳಗದವರು ಹರ್ಷ ವ್ಯಕ್ತಪಡಿಸಿದ್ದಾರೆ.