ಎಂ.ಎ ಪರೀಕ್ಷೆಯಲ್ಲಿ ಡೊಣಮರಡಿ(ಎಂ) ಗ್ರಾಮದ ಕರಿಯಮ್ಮಗೆ 3ನೇ ರ್‍ಯಾಂಕ್‌

ರಾಯಚೂರು:
ಮಸ್ಕಿ ತಾಲೂಕಿನ ಡೊಣಮರಡಿ (ಎಂ) ಗ್ರಾಮದ ಕರಿಯಮ್ಮ ಎಚ್ ತಂದೆ ಕೆಂಚಣ್ಣ ಹಣಗಿ
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 2019-20ನೇ ಸಾಲಿನ ಎಂ.ಎ ಇತಿಹಾಸ ಹಾಗೂ ಪುರಾತತ್ವ ಅಧ್ಯಯನ ವಿಭಾಗದ ಅಂತಿಮ ವರ್ಷದ ಪರೀಕ್ಷೆಯಲ್ಲಿ 3ನೇ ರ್‍ಯಾಂಕ್‌ ಪಡೆದಿದ್ದಾರೆ.