ಮಾನ್ವಿ
ಸ್ಥಳೀಯ ಪುರಸಭೆಗೆ 5ಜನ ಸದಸ್ಯರನ್ನು ನಾಮ ನಿರ್ದೇಶನ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಿಮಲಾ ಭಾಸ್ಕರ್ ಜಗ್ಲಿ, ಚಂದ್ರಶೇಖರ, ಮೋಹನ್ ದಾನಿ, ಗಿರಯ್ಯ ಆದಾಪುರಪೇಟೆ ಹಾಗೂ ಶರಣಯ್ಯ ಸ್ವಾಮಿ ಪುರಸಭೆಯ ನೂತನ ನಾಮ ನಿರ್ದೇಶನ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಗುರುವಾರ £ಅವರು ಪುರಸಭೆಯ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶನಾಯಕ ಬೆಟ್ಟದೂರು, ಪುರಸಭೆಯ ಉಪಾಧ್ಯಕ್ಷ ಶುಕಮುನಿ, ಮುಖಂಡ ಜಿಲಾನಿ ಖುರೇಷಿ ಸೇರಿದಂತೆ ಪುರಸಭೆಯ ಆಡಳಿತ ಮಂಡಳಿ ಸದಸ್ಯರು ನೂತನ ನಾಮ ನಿರ್ದೇಶನ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಿದರು.