ಮಾನ್ವಿ: ವಿಜಯ ಸಂಕಲ್ಪ ಅಭಿಯಾನಕ್ಕೆ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಚಾಲನೆ

ಮಾನ್ವಿ: ವಿಜಯ ಸಂಕಲ್ಪ ಅಭಿಯಾನಕ್ಕೆ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಚಾಲನೆ
ಸರ್ಕಾರದ ಸಾಧನೆಗಳ ಜನಜಾಗೃತಿಗೆ ಸಲಹೆ
ಮಾನ್ವಿ ಜ.21:‘ಬಿಜೆಪಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು, ಸಾಧನೆಗಳ ಕುರಿತು ಪ್ರತಿ ಮನೆ, ಮನಕ್ಕೆ ಜಾಗೃತಿ ಮೂಡಿಸಬೇಕು’ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ತಿಪ್ಪರಾಜು ಹವಾಲ್ದಾರ್ ಕರೆ ನೀಡಿದರು.
ಶನಿವಾರ ಪಟ್ಟಣದ ಮುಖಂಡ ಮಲ್ಲನಗೌಡ ಬಿ.ಪಾಟೀಲ್ ನಕ್ಕುಂದಿ ಅವರ ನಿವಾಸದಲ್ಲಿ  ಅವರು ಸರ್ಕಾರದ ಸಾಧನೆಗಳ ಕರಪತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ‘ಜ.21ರಿಂದ29ರವರೆಗೆ ರಾಜ್ಯದ 312 ಮಂಡಲಗಳಲ್ಲಿ ಬಿಜೆಪಿ ಪಕ್ಷದ ವತಿಯಿಂದ ವಿಜಯ  ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ.  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಜನಪರ ಯೋಜನೆಗಳ ಅನುಷ್ಠಾನದ ಮೂಲಕ ಸಮಾಜದ ಎಲ್ಲಾ ವರ್ಗದವರಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಿವೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಸರಕಾರದ ನಾಮನಿರ್ದೇಶಿತ ಸದಸ್ಯರು ರಾಜ್ಯ ಹಾಗೂ ಕೇಂದ್ರ ಸರ್ಕಾರದÀ ಸಾಧನೆಗಳ ಬಗ್ಗೆ  ಜನತೆಗೆ ಮನವರಿಕೆ ಮಾಡಬೇಕು.  ಮುಂದಿನ ಸಾರ್ವತಿಕ ವಿಧಾನಸಭಾ ಚುನಾವಣೆಯಲ್ಲಿ ಮಿಷನ್ 150 ಗುರಿಯನ್ನು ಮುಟ್ಟಲು ಸಂಕಲ್ಪ ಮಾಡಬೇಕು’ ಎಂದರು.
ಪಕ್ಷದ ಮುಖಂಡರು  ಪಟ್ಟಣದ ಮನೆಮನೆಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಕರಪತ್ರ ಗಳನ್ನು ವಿತರಿಸಿದರು.
ಮಾಜಿ ಶಾಸಕರಾದ  ಗಂಗಾಧರ ನಾಯಕ ಹಾಗೂ ಬಸನಗೌಡ ಬ್ಯಾಗವಾಟ್, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ಮುಖಂಡರಾದ ಉಮೇಶ ಸಜ್ಜನ್, ಮಲ್ಲನಗೌಡ ಬಿ.ಪಾಟೀಲ್ ನಕ್ಕುಂದಿ,  ಅಯ್ಯಪ್ಪನಾಯಕ ಮ್ಯಾಕಲ್, ಗುರುಸಿದ್ದಪ್ಪ ಕಣ್ಣೂರು, ಶ್ರೀಕಾಂತ ಪಾಟೀಲ್ ಗೂಳಿ ಮತ್ತಿತರರು ಇದ್ದರು.