ರಾಜ್ಯಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ

ಮಾನ್ವಿ(ರಾಯಚೂರು ಜಿಲ್ಲೆ) .ಡಿ .16 : ಪಟ್ಟಣದ ಪ್ರಾರ್ಥನಾ ದತ್ತಿ ಸಂಸ್ಥೆಯ ವತಿಯಿಂದ ಎರಡನೇ ವರ್ಷದ ರಾಜ್ಯಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರಕ್ಕಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ ಎಂದು ಪ್ರಾರ್ಥನಾ ದತ್ತಿ ಸಂಸ್ಥೆಯ ಅಧ್ಯಕ್ಷ ಡಾ.ಯಂಕನಗೌಡ ಬೊಮ್ಮನಹಾಳ ಹಾಗೂ ಸಂಚಾಲಕ ಬಸವರಾಜ ಭೋಗಾವತಿ ತಿಳಿಸಿದ್ದಾರೆ . 2022 ರಲ್ಲಿ ಪ್ರಕಟವಾದ ಕನ್ನಡದ ಎರಡು ಕೃತಿಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುವುದು . ಅತ್ಯುತ್ತಮ ಕಥಾ ಸಂಕಲನಕ್ಕೆ ರೂ 10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ , ಅತ್ಯುತ್ತಮ ಕವನ ಸಂಕಲನಕ್ಕೆ ರೂ 10ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು . ಆಸಕ್ತರು 31 ಡಿಸೆಂಬರ್ 2022 ರ ಒಳಗೆ ಸ್ವವಿವರಗಳೊಂದಿಗೆ ತಮ್ಮ ಕೃತಿಯ ಮೂರು ಪ್ರತಿಗಳನ್ನು ಕಳುಹಿಸಬೇಕು . ಕೃತಿಗಳನ್ನು ಕಳುಹಿಸಬೇಕಾದ ವಿಳಾಸ : ಎಂ.ಎ.ಪಾಟೀಲ್ ವಕೀಲರು ( ನಿವೃತ್ತ ಸರ್ಕಾರಿ ಅಭಿಯೋಜಕರು ) , ಅಮರೇಗೌಡರ ಕಾಂಪ್ಲೆಕ್ಸ್ ಮಾನ್ವಿ .ಪಿನ್-584123 ರಾಯಚೂರು ಜಿಲ್ಲೆ . ಹೆಚ್ಚಿನ ಮಾಹಿತಿಗಾಗಿ 7337754523 , 9880013122 ಮೊಬೈಲ್ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.