ನಾನು ನೋಡಿದ ‘ಗಂಧದಗುಡಿ’-ಅಂಬಣ್ಣ ನಾಯಕ ಉಮಳಿಹೊಸೂರು

ಕರ್ನಾಟಕ ರತ್ನ , ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನೈಜ ನಟನೆಯ ಚಿತ್ರ ಈ ನಮ್ಮ ‘ಗಂಧದ ಗುಡಿ’ ಮನೆ ಮಂದಿಯಲ್ಲಾ ನೋಡಬೇಕಾದ ಅಧ್ಬುತ ಚಿತ್ರ ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳಂತೂ ನೋಡಲೇಬೇಕು ಪ್ರಾರಂಭದಲ್ಲಿ ನಾಗರಹೊಳೆ ಅಭಯಾರಣ್ಯದಿಂದ ಪ್ರಾರಂಭವಾಗಿ ಕಾಳಿ ನದಿ ನೇತ್ರಾಣಿ ದ್ವೀಪ ಬಿ ಆರ್ ಟಿ ಟೈಗರ್ ರಿಸರ್ವ್ ಬುಡಕಟ್ಟು ಜನರ ಬದುಕು ಬವಣೆ ನಂತರದಲ್ಲಿ ಅರಣ್ಯ ಇಲಾಖೆಯವರೊಂದಿಗೆ ಸಂಭಾಷಣೆ ಗಸ್ತು ತಿರುಗುವಿಕೆ ಆನೆ ಹಿಡಿಯುವ ದೃಶ್ಯ ನಮ್ಮ #ಉತ್ತರ #ಕರ್ನಾಟಕ ದ ಹಂಪಿ ವಿಜಯನಗರ ಸುತ್ತಮುತ್ತಲಿನ ಪ್ರದೇಶ ಜೋಗಜಲಪಾತ ಆಗುಂಬೆಯ ಪ್ರಪಂಚದಲ್ಲಿ ಅತ್ಯಧಿಕ ವಿಷ ಹೊಂದಿರುವ ಕಾಳಿಂಗ ಸರ್ಪ ದ ಸನ್ನಿವೇಶ ಕಾಳಿ ಸಮೀಪ ಪಾತಾಗುಡಿ ಸರ್ಕಾರ ಶಾಲಾ ಮಕ್ಕಳೊಂದಿಗೆ ಕನ್ನಡ ಹಾಡು ಕಲಿಸುವ ದೃಶ್ಯ ಹೀಗೆ ಸಿನಿಮಾದುದ್ದಕ್ಕೂ ಕರ್ನಾಟಕದ ಪ್ರಾಪಂಚಿಕ ಸಸ್ಯವರ್ಗ ಪ್ರಾಣಿ ಸಂಪತ್ತು ಅವುಗಳ ನೈಜ‌ ಜೀವನ ತೋರಿಸುತ್ತಾ ನಿರ್ದೇಶಕರಾದ ಅಮೋಘವರ್ಷ ರವರು ಒಂದೊಂದರ ಬಗ್ಗೆ ವಿಶೇಷ ಅಂಶಗಳನ್ನ ವಿವರಿಸುತ್ತಾ ಒಂದ್ಕಡೆ ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ಸ್ವರ್ಗವನ್ನ ತೋರಿಸುತ್ತಾ ಮತ್ತೊಂದು ಕಡೆ ಪುನೀತ್ ರಾಜಕುಮಾರ ಸರ್ ರವರಿಂದ ಪರಿಸರ ಸಂರಕ್ಷಣೆ ಪ್ಲಾಸ್ಟಿಕ್ ಬಳಕೆ ಇಂತಹ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವ ದೃಶ್ಯ ಗಂಧದಗುಡಿ ಕೊನೆಗೆ ಪುನೀತ್ ಸರ್ ಕೈ ಮುಗಿಯುವ ಭಾವನಾತ್ಮಕ ದೃಶ್ಯ ಇವೆಲ್ಲಾ ನೋಡುವ ಪ್ರೇಕ್ಷಕನಿಗೆ ಸಿನಿಮಾ ನೋಡುವವರು ಪುನೀತ್ ಸರ್ ಜೊತೆ ಪ್ರವಾಸ ಮಾಡ್ತಿದ್ದಿವಿ ಎನ್ನುವ ಹೊಸ ಅನುಭವ ಬರುತ್ತೆ ದಯವಿಟ್ಟು ಯಾರೆಲ್ಲಾ ನೋಡಿಲ್ಲಾ ನೊಡ್ಕೊಂಡ್ ಬನ್ನಿ ಈ ನಮ್ಮ ಗಂಧದಗುಡಿ.

ಜೊತೆಗಿರದ ಜೀವ ಎಂದಿಗೂ ಜೀವಂತ ಅಪ್ಪು ಅಜರಾಮರ.

ಅಂಬಣ್ಣ ನಾಯಕ, ಉಮಳಿಹೊಸೂರು