ಸೆ.12ಕ್ಕೆ ಮಾನ್ವಿಯಲ್ಲಿ ಡಾ.ಸಿ.ಆರ್.ಚಂದ್ರಶೇಖರ ಅವರೊಂದಿಗೆ ಆರೋಗ್ಯ ಸಂವಾದ ಕಾರ್ಯಕ್ರಮ

ಡಾ.ಸಿ.ಆರ್.ಚಂದ್ರಶೇಖರ

ಮಾನ್ವಿ ಸೆ,9: ಪಟ್ಟಣದ ರಾಜಗುರು ಲೋಕಕಲ್ಯಾಣ ಟ್ರಸ್ಟ್ ವತಿಯಿಂದ ಸೆ.12ರಂದು ಸಂಜೆ 5ರಿಂದ7ಗಂಟೆವರೆಗೆ ಕಲ್ಮಠದ ಧ್ಯಾನ ಮಂದಿರದಲ್ಲಿ ಆರೋಗ್ಯ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯ ಮಾನಸಿಕ ಕಾಯಿಲೆಗಳ ಖ್ಯಾತ ತಜ್ಞ ಡಾ.ಸಿ.ಆರ್.ಚಂದ್ರಶೇಖರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ‘ಮಾನಸಿಕ ಆರೋಗ್ಯ ಕಾಪಾಡುವುದು ಮತ್ತು ಒತ್ತಡ ನಿರ್ವಹಣೆ’ ಕುರಿತು ಅವರು ವಿಷಯ ಮಂಡಿಸುವರು. ಕಲ್ಮಠದ ಪೀಠಾಧ್ಯಕ್ಷರಾದ ಷ.ಬ್ರ.ಶ್ರೀಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಷ.ಬ್ರ.ಶ್ರೀವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯವಹಿಸುವರು.
ನಂತರ ಅವರು ಸಾರ್ವಜನಿಕರ ಜತೆ ಸಂವಾದ ನಡೆಸುವರು. ಕಾರ್ಯಕ್ರಮದಲ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಲು ರಾಜಗುರು ಲೋಕಕಲ್ಯಾಣ ಟ್ರಸ್ಟ್ ಪದಾಧಿಕಾರಿಗಳು ಕೋರಿದ್ದಾರೆ.