ಮಾನ್ವಿಯಲ್ಲಿ ಗಣೇಶೋತ್ಸವ ಆಚರಣೆಗೆ ಸಿದ್ಧತೆ

ಮಾನ್ವಿ ಆ.29: ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಮಾನ್ವಿ ಪಟ್ಟಣದಲ್ಲಿ ಗಣೇಶ ಮೂರ್ತಿಗಳ ಮಾರಾಟದ ಭರಾಟೆ ಜೋರಾಗಿದೆ. ಕೋವಿಡ್ ಕಾರಣ ಎರಡು ವರ್ಷಗಳಿಂದ ಕಳೆಗುಂದಿದ್ದ ಗಣೇಶೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಜನತೆ ಸಿದ್ಧರಾಗಿರುವುದು ಗಣೇಶ ವಿಗ್ರಹಗಳ ಮಾರಾಟಗಾರರಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಪಿಒಪಿ ಹಾಗೂ ಮಣ್ಣಿನಿಂದ ತಯಾರಿಸಿದ ವಿಗ್ರಹಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ನೋಡುಗರ ಗಮನ ಸೆಳೆಯುತ್ತಿವೆ. ಮನೆಗಳಲ್ಲಿ ಪ್ರತಿಷ್ಠಾಪನೆಗೆ ಪರಿಸರ ಸ್ನೇಹಿಯಾದ ಮಣ್ಣಿನಿಂದ ತಯಾರಿಸಿದ ವಿಗ್ರಹಗಳ ಖರೀದಿಗೆ ಸ್ಥಳೀಯರು ಹೆಚ್ಚು ಆಸಕ್ತಿವಹಿಸಿರುವುದು ಕಂಡು ಬಂದಿದೆ. ಪಿಒಪಿ ಯಿಂದ ತಯಾರಿಸಿದ ವಿಗ್ರಹಗಳಿಗಿಂತ ಮಣ್ಣಿನ ವಿಗ್ರಹಗಳ ದರ ಹೆಚ್ಚಾಗಿದೆ. ಕಾರಣ ಸ್ಥಳೀಯ ವರ್ತಕರು ಬಳ್ಳಾರಿ ಮತ್ತು ಗಜೇಂದ್ರಗಡ ಪಟ್ಟಣಗಳಲ್ಲಿ ತಯಾರಿಸಿದ ಮಣ್ಣಿನ ವಿಗ್ರಹಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ.
ರೂ.300-400ರ ದರದಲ್ಲಿ ಸಣ್ಣ ಗಾತ್ರದ (1-1.5ಅಡಿ ಎತ್ತರ) ಮಣ್ಣಿನ ಗಣೇಶ ವಿಗ್ರಹಗಳನ್ನು ಮಾರಾಟ ಮಾಡಲಾಗುತ್ತಿದೆ.

-ಈ ಬಾರಿ ಗಣೇಶ ವಿಗ್ರಹಗಳ ಮಾರಾಟ ಚೆನಾಗಿದೆ. ಮಣ್ಣಿನಿಂದ ತಯಾರಿಸಿದ ವಿಗ್ರಹಗಳ ಖರೀದಿಗೆ ಹೆಚ್ಚಿನ ಬೇಡಿಕೆ ಇದೆ.
– ಸತ್ಯ ಶ್ರೀನಿವಾಸ,
ವರ್ತಕ, ಮಾನ್ವಿ