ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿ- ಮಹಿಬೂಬ್ ಮದ್ಲಾಪೂರ

ಮಾನ್ವಿ ಆ.28: ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾದಿನದ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವತಿಯಿಂದ ಪಟ್ಟಣದ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಶೆಟಲ್ ಬ್ಯಾಡ್ಮಿಂಡನ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು. ಕ್ರೀಡಾಂಗಣದ ವ್ಯವಸ್ಥಾಪಕ ಮಹಿಬೂಬ್ ಮದ್ಲಾಪೂರ ಮಾತನಾಡಿ, ‘ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿ’ ಎಂದರು.

ಪಂದ್ಯಾವಳಿಯಲ್ಲಿ ಅಭಿಷೇಕ್ ಮತ್ತು ಡಾ.ಶಂಕರ್ ಪ್ರಥಮ ಬಹುಮಾನ, ಜಿಲಾನಿ ತಿರಂಗಾ ಹಾಗೂ ಲಲಿತ್ ಸಿಂಗ್ ದ್ವಿತೀಯ ಬಹುಮಾನ ಪಡೆದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ಪುರಸಭೆಯ ಸದಸ್ಯ ಶರಣಪ್ಪ ಮೇದಾ, ದೈಹಿಕ ಶಿಕ್ಷಣ ಅಧಿಕಾರಿ ಕೇಶವ್, ವಲಿಬಾಬು, ಬಸವರಾಜ್ , ಪೀರ್ ಭಾಷ, ಪ್ರದೀಪ್ ಕುಮಾರ್, ರಮೇಶ, ಮಲ್ಲಿಕಾರ್ಜುನ ಮೇಟಿ, ವಿಜಯ ಕುಮಾರ್, ಅಶೋಕ, ಸಿ.ಡಿ. ವಿಜಯ, ಶ್ರೀಧರ್ ಗೌಡ, ಪ್ರಸಾಧ್ ವೀರಪ್ಪನೇನಿ, ಸ್ಥಳೀಯ ಕ್ರೀಡಾಪುಟಗಳು, ಸಂಘ ಸಂಸ್ಥೆಗಳ ಮುಖಂಡರು ಇದ್ದರು.