ಸಿಂಧನೂರಿನ ವಿಜಡಮ್ ಕಾಲೇಜಿನಲ್ಲಿ ಶೈಕ್ಷಣಿಕ ಮೇಳ: ಮಾನ್ವಿಯ ಪ್ರಗತಿ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ

ಮಾನ್ವಿ ಆ.23: ಸಿಂಧನೂರು ನಗರದ ವಿಜಡಮ್ ಪದವಿ ಪೂರ್ವ ಕಾಲೇಜು ಈಚೆಗೆ ಆಯೋಜಿಸಿದ್ದ ಕಾಮ್‌ಫೆಸ್ಟ್ ಶೈಕ್ಷಣಿಕ ಮೇಳದ ವಿವಿಧ ಸ್ಪರ್ಧೆಗಳಲ್ಲಿ ಮಾನ್ವಿ ಪಟ್ಟಣದ ಪ್ರಗತಿ ಪಿಯು ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಮಾರ್ಕೆಟಿಂಗ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ವೀರೇಶ ಹಾಗೂ ಪ್ರತಿಭಾ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ಲಾನಿಂಗ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಆಯೆಷಾ ಅಲ್ಮಿ, ಪ್ರತಿಭಾ, ವೀರೇಶ, ಸಿದ್ದೇಶ, ಸತೀಶ ಸ್ವಾಮ ಅವರ ತಂಡ ಪ್ರಥಮ ಸ್ಥಾನ ಗಳಿಸಿದೆ. ರಸಪ್ರಶ್ನೆ ಹಾಗೂ ಹಣಕಾಸು ವಿಭಾಗದ ಸ್ಪರ್ಧೆಗಳಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಂಗಳವಾರ ಪ್ರಗತಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಮೇಳದ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಲಾಯಿತು. ಬಸವರಡ್ಡಿ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ತಿಪ್ಪಣ್ಣ ಎಂ.ಹೊಸಮನಿ ಬಲ್ಲಟಗಿ, ಕಾಲೇಜಿನ ಪ್ರಾಂಶುಪಾಲ ಬಸವರಾಜ ಭೋಗಾವತಿ, ಉಪ ಪ್ರಾಂಶುಪಾಲೆ ಸುಮಾ ಟಿ.ಹೊಸಮನಿ, ಉಪನ್ಯಾಸಕರಾದ ಜಯಲಕ್ಷ್ಮೀ ಟಿ.ಚೀಕಲಪರ್ವಿ, ಮಲ್ಲಮ್ಮ ಪೋತ್ನಾಳ, ನಾಗರಾಜ ಚಿಮ್ಲಾಪುರ ಹಾಗೂ ಫಿರೋಜ್ ರಾಜ್ ಇದ್ದರು.