ಪೋತ್ನಾಳ: ಬೆಳಗು ಟ್ರಸ್ಟ್ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮಾನ್ವಿ ಜು‌16: ತಾಲ್ಲೂಕಿನ ಪೋತ್ನಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಬೆಳಗು ಟ್ರಸ್ಟ್ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಆಗಮಿಸಿದ ಸುರೇಶ್ ಕುರ್ಡಿ, ತಮ್ಮ ಜೀವನದ ಅನುಭವಗಳು ಮತ್ತು ವಿದ್ಯಾರ್ಥಿಗಳು ಹೇಗೆ ಅಚಲ ಶ್ರದ್ಧೆ, ನಿಷ್ಠೆಯಿಂದ ಓದಿದರೆ ಯಶಸ್ಸನ್ನು ಪಡೆಯಬಹುದು ಎಂಬುದರ ಕುರಿತು ಸಲಹೆಗಳನ್ನು ನೀಡಿದರು. ಉಪನ್ಯಾಸಕ ಅಮರೇಶ್ ಬಿ ಮಾತನಾಡಿ, ವಿದ್ಯಾರ್ಥಿಗಳು ಓದುವುದನ್ನು ರೂಡಿಸಿಕೊಳ್ಳಿ , ದೊಡ್ಡ ದೊಡ್ಡ ಕನಸುಗಳನ್ನು ಕಾಣಿ, ಅದನ್ನು ಯಶಸ್ವಿಗೊಳಿಸಲು ನಿಮ್ಮ ಪ್ರಯತ್ನ ಸದಾ ಇರಲಿ. ಓದುವಾಗ ಶ್ರದ್ಧೆ ಮತ್ತು ಆಸಕ್ತಿಯಿಂದ ಓದಿ ಎಂದರು.

ಬೆಳಗು ಟ್ರಸ್ಟ್‌ ಅಧ್ಯಕ್ಷರಾದ ಶರಣು ಕುಮಾರ್ ಅವರು ಪ್ರಾಸ್ತಾವಿಕ‌ ನುಡಿಯಲ್ಲಿ ಬೆಳಗು ಟ್ರಸ್ಟ್ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ವಿಶೇಷವಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ನಿರಂತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಒಳ್ಳೆಯ ಹುದ್ದೆಯಲ್ಲಿ ಇರಬೇಕೆಂದು ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯಿನಿ ನೀಲೋಫರ್ ಬೇಗಂ ರವರು, ಮಕ್ಕಳು ಸಾಧಕರಾಗಬೇಕು. ಸಾಧನೆಗೆ ಬೇಕಾದ ಪರಿಶ್ರಮ ನಿಮ್ಮದಾಗಿರಬೇಕು ಎಂದು ಹೇಳಿದರು. ನಂತರದಲ್ಲಿ ಮಾತಾಡಿದ ನೀಲಕಂಠ ಸಹ ಶಿಕ್ಷಕರು ತಡಕಲ್ ಇವರು ಓದುವ ಕ್ರಮವನ್ನು ಮತ್ತು ಪೋಷಕರು ಮಕ್ಕಳಿಗೆ ಓದಲು ಪ್ರೋತ್ಸಾಹಿಸಬೇಕೆಂದು ಹೇಳಿದರು. ಸಂಪನ್ಮೂಲ ವ್ಯಕ್ತಿ ಲಕ್ಷ್ಮಿಕಾಂತ್ ಸರ್ ಅವರು, ಬೆಳಗು ಸಂಸ್ಥೆ ಇಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿ ಕೇಙದ್ರಿತ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಶಯಗಳೊಂದಿಗೆ ಹೆಚ್ಚು ಕಾರ್ಯಕ್ರಮಗಳು ಸಮಾಜಕ್ಕೆ ನೀಡಲಿ ಎಂದರು. ನಂತರದಲ್ಲಿ ಮಾತನಾಡಿದ ಸಾಗರ್ ಜೈ ಅವರು ,ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಸ್ನೇಹ ಜ್ಯೋತಿ ಪ್ರೌಢಶಾಲೆ ಹಾಗೂ ಸೇಂಟ್ ಝೆಕಾರಿಯ ಪ್ರೌಢಶಾಲೆ ಹಾಗೂ ಸರಕಾರಿ ಪ್ರೌಢಶಾಲೆ ಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಿ.ವೀರೇಶ್ ಜೀನೂರ ಭಾಗವಹಿಸಿದ್ದರು. ಶಾಲೆಯ ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.