ಮಾನ್ವಿ: ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಉರಗ ದಿನಾಚರಣೆ

ಮಾನ್ವಿ: ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಉರಗ ದಿನಾಚರಣೆ

ಮಾನ್ವಿ ಜು.16: ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಅಂತರರಾಷ್ಟ್ರೀಯ ಉರಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ರಾಯಚೂರಿನ ಉರಗ ತಜ್ಞ ಅಫ್ಸರ್ ಹುಸೇನ್ ಮಾತನಾಡಿ, ‘ಪ್ರಪಂಚದಲ್ಲಿ ಸುಮಾರು 2,600 ಜಾತಿಯ ಹಾವುಗಳಿವೆ. ಇವುಗಳಲ್ಲಿ ಕೇವಲ ನಾಲ್ಕಾರು ಪ್ರಬೇಧದ ಹಾವುಗಳು ಮಾತ್ರ ವಿಷಪೂರಿತವಾದವು. ಉಳಿದ ಹಾವುಗಳು ವಿಷಪೂರಿತವಲ್ಲ. ಅನಗತ್ಯವಾಗಿ ಹಾವುಗಳನ್ನು ಹಿಂಸಿಸುವುದು, ಕೊಲ್ಲುವುದು ಸರಿಯಲ್ಲ. ಒಂದು ವೇಳೆ ನಾವು ವಾಸಿಸುವ ಪರಿಸರದಲ್ಲಿ ಹಾವುಗಳು ಕಂಡು ಬಂದರೆ, ತಕ್ಷಣ ಉರಗ ರಕ್ಷಕರಿಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು. ಹಾವುಗಳ ಕುರಿತ ವಿಶೇಷ ಮಾಹಿತಿ ನೀಡುವುದರ ಜೊತೆಗೆ ತಮ್ಮ ಜೊತೆಗೆ ತಂದಿದ್ದ ಹತ್ತಾರು ಪ್ರಬೇಧದ ಹಾವುಗಳನ್ನು ಕೈಯಲ್ಲಿ ಹಿಡಿದು ತೋರಿಸಿದರು. ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಕೆ.ವಿಜಯಲಕ್ಷಿö್ಮÃ, ವಲಯ ಅರಣ್ಯಾಧಿಕಾರಿ ರಾಜೇಶ ನಾಯಕ್, ಪಕ್ಷಿಪ್ರೇಮಿ ಸಲ್ಲಾವುದ್ದೀನ್, ಹನುಮಂತಪ್ಪ ಬಿರಾದಾರ್, ರಮೇಶ್, ಜಗನ್ನಾಥ ಚೌದ್ರಿ, ಸಂಸ್ಥೆಯ ಶಿಕ್ಷಕರಾದ ಅನೀಸ್ ಫಾತಿಮಾ ಮೆಡಂ, ಬಸವರಾಜ್, ರಹೀಂ ಪಾಷಾ ಮತ್ತಿತರರು ಇದ್ದರು.