ಕಲ್ಯಾಣ ಕಾವ್ಯ: ‘ಸಿದ್ಧರಾಮೋತ್ಸವ’ – ಮುಕ್ಕಣ್ಣ ಕರಿಗಾರ

ಕಲ್ಯಾಣ ಕಾವ್ಯ

‘ಸಿದ್ಧರಾಮೋತ್ಸವ’

ಮುಕ್ಕಣ್ಣ ಕರಿಗಾರ

ಸಿದ್ಧರಾಮೋತ್ಸವವು
ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯನವರೊಬ್ಬರ ಉತ್ಸವವಲ್ಲ
ದಲಿತರು,ಬಡವರು,ಅಲ್ಪಸಂಖ್ಯಾತರು
ಹಿಂದುಳಿದವರೆಲ್ಲರ ಉತ್ಸವ.
ಸಿದ್ರಾಮಯ್ಯ ಒಬ್ಬ ವ್ಯಕ್ತಿಯಲ್ಲ;
ದಲಿತ ದಮನಿತರೆಲ್ಲರ ಶಕ್ತಿ,ಸ್ಫೂರ್ತಿ.
ದಲಿತರ ನಿಜಬಂಧು
ಅಲ್ಪಸಂಖ್ಯಾತರ ಹಿತೈಷಿ
ಹಿಂದುಳಿದವರ ಅಣ್ಣ
ಈ ಸಿದ್ರಾಮಣ್ಣ
ಅಣ್ಣಬಸವನಂತೆಯೇ ಶ್ರೀಸಾಮಾನ್ಯರ ಬಂಧು
ಜನಸಾಮಾನ್ಯರ ಭರವಸೆ,ಬೆಳಕು.
ಬಾಯಿಸತ್ತವರ ದನಿಯಾದ ಧೀಮಂತ ನಾಯಕ
ಅಸಹಾಯಕರ ಆಶಾಕಿರಣ
ದಲಿತರಿಗೆ ಸ್ವಾವಲಂಬನೆಯ ಪಥತೋರಿದ ದ್ರಷ್ಟಾರ
ಸಿದ್ರಾಮಯ್ಯ ಆಸ್ತಿಕರೊ ನಾಸ್ತಿಕರೊ
ಅದು ಮುಖ್ಯವಲ್ಲ
ಕರುನಾಡಿನ ಶೂದ್ರರೆಲ್ಲರ ಆಸ್ತಿಯಾಗಿದ್ದಾರೆ,ಅಸ್ತ್ರವಾಗಿದ್ದಾರೆ.
ಜಾತಿಜಡರ ನಡುವೆ ಪದದುಳಿತರ ಆಶಾ
ಜ್ಯೋತಿ
ಮತಿಮೂಢರ ಮಧ್ಯೆ ಮೃಡಮಹಾದೇವನ ಕಲ್ಯಾಣಮತಿ.
ಹುಸಿಪ್ರತಿಷ್ಠಿತರ ಪ್ರಶ್ನಿಸುತ್ತ
ಅಧಿಕಾರ ತಮ್ಮಸ್ವತ್ತು ಎಂದು ಭಾವಿಸಿದ್ದವರ
ನಡುವೆಯೇ ಘರ್ಜಿಸಿ
ಮೇಲೆದ್ದ ಅಹಿಂದ ಕೇಸರಿ
ಉಡುವ ಬಿಳಿಬಟ್ಟೆಯಂತೆಯೆ
ಮುಖ್ಯಮಂತ್ರಿಯಾಗಿದ್ದೂ ಕಸ ಕೊಳೆಗಳಂಟಿಸಿಕೊಳ್ಳದ
ಧವಳಶುಭ್ರ ವ್ಯಕ್ತಿತ್ವ
ಅಚ್ಚರಿಯ ಸಚ್ಚಾರಿತ್ರ್ಯ
ಸರಿಸಾಟಿ ಇಲ್ಲದ ನಾಯಕ
ನಾಡಜನರಹಿತಕೆ ದುಡಿವುದು ನಿತ್ಯಕಾಯಕ.
ಹಿಂದೂಸ್ತಾನದ ಹೆಮ್ಮೆ,ಭಾರತಾಂಬೆಯ ವರಪುತ್ರ.
ತುಂಬಲಿಹವಂತೆ ಈ ಜನಸಾಮಾನ್ಯರ ದೇವರಿಗೆ
ವರ್ಷಗಳು ಎಪ್ಪತ್ತೈದು.
ಎಣಿಕೆ ದೇಹದ ಆಯುಷ್ಯಕ್ಕಲ್ಲದೆ
ಸಿದ್ರಾಮಯ್ಯನವರ ಅಹಿಂದೋದ್ಧಾರದ
ತತ್ತ್ವ ಬದ್ಧತೆಗಲ್ಲ.
ನೂರ್ಕಾಲ ಬಾಳಲಿ
ನಾಡ ಜನರ ಹೃದಯಸಿಂಹಾಸನಾಧೀಶ್ವರ
ಮೈಸೂರ ಹುಲಿ! ಕನ್ನಡದ ಕಲಿ!

ಮುಕ್ಕಣ್ಣ ಕರಿಗಾರ

29.06.2022