ನಾಳೆ ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಸಭೆ– ತ್ರಯಂಬಕೇಶ

ರಾಯಚೂರು, ಜೂ.೨೫: ದೇವದುರ್ಗ ತಾಲೂಕಿನ ಗಬ್ಬೂರಿನ ಮಹಾಶೈವ ಧರ್ಮಪೀಠದಲ್ಲಿ ೨೦೨೨ ನೇ ಸಾಲಿನ ” ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯಭೂಷಣ ಪ್ರಶಸ್ತಿ” ಗಾಗಿ ಸಾಹಿತಿಗಳನ್ನು ಆಯ್ಕೆ ಮಾಡಲು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀಮುಕ್ಕಣ್ಣ ಕರಿಗಾರ ಅವರ ಅಧ್ಯಕ್ಷತೆಯಲ್ಲಿ ಮಹಾಶೈವಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಸಭೆಯನ್ನು ಕರೆಯಲಾಗಿದೆ ಎಂದು ಕ್ಷೇತ್ರಾಧಿಕಾರಿ ತ್ರಯಂಬಕೇಶ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾಶೈವ ಧರ್ಮಪೀಠದಲ್ಲಿ ಪ್ರತಿವರ್ಷ ನೂಲಹುಣ್ಣಿಮೆಯಂದು’ ಮಹಾಶೈವ ಗುರುಪೂರ್ಣಿಮೆ’ ಯನ್ನು ಆಚರಿಸಲಾಗುತ್ತಿದ್ದು ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರ ಗುರುಗಳಾದ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ಹೆಸರಿನಲ್ಲಿ ಸಾಹಿತ್ಯ,ಸಾಂಸ್ಕೃತಿಕ ಮತ್ತಿತರ ಕ್ಷೇತ್ರಗಳಲ್ಲಿ ಗಣನೀಯಕೊಡುಗೆ ಸಲ್ಲಿಸಿದ ಸಾಧಕರುಗಳಿಗೆ ಪ್ರಶಸ್ತಿ ನೀಡಿ,ಗೌರವಿಸಲಾಗುತ್ತಿದೆ.ನಾಳೆ ನಡೆಯುವ ಸಾಂಸ್ಕೃತಿಕ ಸಮಿತಿಯ ಸಭೆಯಲ್ಲಿ ೨೦೨೨ ನೇ ಸಾಲಿನ ” ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯಭೂಷಣ” ಪ್ರಶಸ್ತಿಗೆ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿ ಸಾಹಿತಿಗಳನ್ನು ಆಯ್ಕೆ ಮಾಡಲಾಗುವುದು.ಪ್ರಶಸ್ತಿಯು ಐವತ್ತೊಂದು ಸಾವಿರ ರೂಪಾಯಿ ನಗದು,ಸ್ಮರಣಿಕೆ ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿದೆ.

ಮಹಾಶೈವ ಧರ್ಮಪೀಠದಲ್ಲಿ ೨೬.೦೬.೨೦೨೨ ರ ಮಧ್ಯಾಹ್ನ ೧.೩೦ ಕ್ಕೆ ನಡೆಯುವ ಸಾಂಸ್ಕೃತಿಕ ಸಮಿತಿಯ ಸಭೆಯಲ್ಲಿ ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಸದಸ್ಯಕಾರ್ಯದರ್ಶಿಗಳಾದ ಡಾ. ಎನ್ ಹೆಚ್ ಪೂಜಾರ,ಸಹ ಕಾರ್ಯದರ್ಶಿಗಳಾದ ಬಸವರಾಜ ಭೋಗಾವತಿ,ಸದಸ್ಯರುಗಳಾದ ಬಸವರಾಜ ಸಿನ್ನೂರ, ಬಸವರಾಜ ಕರೆಗಾರ, ಗಂಗಾಧರಮೂರ್ತಿ, ರಘುನಂದನ್ ಪೂಜಾರಿ,ಷಣ್ಮುಖ ಹೂಗಾರ ಮತ್ತು ಬಸವಲಿಂಗ ಕರಿಗಾರ ಅವರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಹಾಶೈವ ಧರ್ಮಪೀಠದ ಕ್ಷೇತ್ರಾಧಿಕಾರಿ ತ್ರಯಂಬಕೇಶ ತಿಳಿಸಿದ್ದಾರೆ.