ಮಾನ್ವಿ ಜೂನ್,07: ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ದೇವದುರ್ಗದ ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರಾದ ಅಣ್ಣಾರಾವ್ ಇವರನ್ನು ಪ್ರಭಾರಿ ಅಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.ಈ ಹಿಂದೆ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಸ್ಟೆಲ್ಲಾ ವರ್ಗೀಸ್ ಅವರು ಕಾರವಾರಕ್ಕೆ ವರ್ಗಾವಣೆಯಾದ ನಿಮಿತ್ತ ಖಾಲಿ ಇದ್ದ ಕಾರ್ಯ ನಿರ್ವಾಹಕ ಅಧಿಕಾರಿ ಹುದ್ದೆಗೆ ಅಣ್ಣಾರಾವ್ ಅವರನ್ನು ನೇಮಕ ಮಾಡಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ.ಕಾರ್ಯನಿರ್ವಾಹಕ ಹುದ್ದೆಗೆ ಪ್ರಭಾರಿಯಾಗಿ ನೇಮಕಗೊಂಡ ಅಣ್ಣಾರಾವ್ ಅವರು ಮಂಗಳವಾರ ಮಾನ್ವಿ ತಾ.ಪಂ.ಕಾರ್ಯಾಲಯದಲ್ಲಿ ಅಧಿಕಾರದ ಕಾರ್ಯಭಾರ ವಹಿಸಿಕೊಂಡರು. ಕಚೇರಿಯ ಸಿಬ್ಬಂದಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಧಿಕಾರಿ ಅಣ್ಣಾರಾವ್ ಅವರನ್ನು ಸ್ವಾಗತಿಸಿ, ಸನ್ಮಾನಿಸಿದರು.