ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್ ಪುತ್ರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದು ಹೇಗೆ ಗೊತ್ತಾ?

ರಾಯಚೂರು ಮೇ.19: ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ್ ಪಾಟೀಲ್ ಪುತ್ರಿ ಸಾಕ್ಷಿ ಪಾಟೀಲ್ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಟಾಪರ್ ‘ ಮೊದಲ ಸ್ಥಾನ’ ಗಳಿಸಿ ಎಲ್ಲರ ಗಮನ ಸೆಳೆದಿದ್ದಾಳೆ. ಬೆಂಗಳೂರಿನ ಖಾಸಗಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಸಾಕ್ಷಿ ಪಾಟೀಲ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಯಚೂರು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಈ ಸಾಧನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ತಮ್ಮ‌ಮಗಳು ಸಾಕ್ಷಿ ಪಾಟೀಲ್ ಸಾಧನೆಗೆ ಕಾರಣಗಳ ಕುರಿತು ಶಾಸಕ ಡಾ.ಶಿವರಾಜ ಪಾಟೀಲ್ ವಿವರಿಸಿದ್ದು ಹೀಗೆ:

” ಮಗಳ ಸಾಧನೆ ಖುಷಿ ತಂದಿದೆ. ಈ ಸಾಧನೆಯಲ್ಲಿ ನನ್ನ ಪಾತ್ರವಿಲ್ಲ. ಆಕೆಯ ತಾಯಿ ಹಾಗೂ ಮಗಳ ಪಾತ್ರವೇ ಹೆಚ್ಚು. ತಾಯಿಯ ಕಾಳಜಿ ಹಾಗೂ ಶ್ರಮದಿಂದ ಇದೆಲ್ಲಾ ಸಾಧ್ಯವಾಗಿದೆ. ಇದರ ಶ್ರೇಯಸ್ಸು ಆಕೆಯ ತಾಯಿಗೇ ಸಲ್ಲಬೇಕು. ಓದಬೇಕಾದರೆ ಅರ್ಥ ಮಾಡ್ಕೊಂಡು ಶಿಸ್ತಿನಿಂದ ಓದಿ. ರಾತ್ರಿಯೆಲ್ಲಾ ನಿದ್ದೆಗೆಟ್ಟು ಓದೋದ್ರಲ್ಲಿ ಪ್ರಯೋಜನವಿಲ್ಲ‌’ ಎಂದು ಸಲಹೆ ನೀಡಿದ್ದಾಗಿ ಶಾಸಕ ಡಾ.ಶಿವರಾಜ ಪಾಟೀಲ್ ತಿಳಿಸಿದ್ದಾರೆ.