ಸಿನಿಮಾ ನಟನೆಗೆ ಮುಂದಾದ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ!

ಅದೋನಿ ರುಕ್ಮಣ್ಣ ದಿವಾನ್ ಪಾತ್ರದಲ್ಲಿ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ

ಮಾನ್ವಿ ಏ.27: ಮಾನ್ವಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ ಸಿನಿಮಾ ನಟನೆಗೆ ಮುಂದಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರಾಯಚೂರಿನ ಬಿಜೆಪಿ ಮುಖಂಡ ತ್ರಿವಿಕ್ರಮ ಜೋಷಿ ನಿರ್ಮಾಣ ಹಾಗೂ ಮಧುಸೂದನ ಹವಾಲ್ದಾರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಶ್ರೀವಿಜಯದಾಸರು’ ಚಲನಚಿತ್ರದಲ್ಲಿ ಬಸನಗೌಡ ಬ್ಯಾಗವಾಟ ಅಭಿನಯಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕಳೆದ ಕೆಲ ತಿಂಗಳಿAದ ಬೆಂಗಳೂರು, ಕನಕಗಿರಿ, ಆನೆಗುಂದಿ, ರಾಯಚೂರು ಸೇರಿದಂತೆ ವಿವಿಧಡೆ ಚಿತ್ರೀಕರಣ ನಡೆದಿದ್ದು ಬಸನಗೌಡ ಬ್ಯಾಗವಾಟ ಅವರು ಆದೋನಿಯ ರುಕ್ಮಣ್ಣ ದಿವಾನ್ ಪಾತ್ರದಲ್ಲಿ  ಅಭಿನಯಿಸುತ್ತಿದ್ದಾರೆ. ನಿರ್ಮಾಪಕರಾಗಿರುವ ತ್ರಿವಿಕ್ರಮ ಜೋಷಿ ಅವರು ವಿಜಯದಾಸರ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ತಮ್ಮ ಅಭಿನಯದ ಕುರಿತು ಪ್ರತಿಕ್ರಿಯಿಸಿದ ಬಸನಗೌಡ ಬ್ಯಾಗವಾಟ, ‘ ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಗ್ರಾಮ  ವಿಜಯದಾಸರ ಹುಟ್ಟೂರು. ವಿಜಯದಾಸರ ಜೀವನಾಧಾರಿತ ಸಿನಿಮಾದಲ್ಲಿ ಅಭಿನಯ ಖುಷಿ ಹಾಗೂ ಹೊಸ ಅನುಭವ ನೀಡಿದೆ. ಮಿತ್ರರಾದ ತ್ರಿವಿಕ್ರಮ ಜೋಷಿ ಅವರ ಸಲಹೆ ಮೇರೆಗೆ ರುಕ್ಮಣ್ಣ ದಿವಾನ್ ಪಾತ್ರದ ಅಭಿನಯಕ್ಕೆ ಒಪ್ಪಿಕೊಂಡಿರುವೆ’ ಎಂದು ತಿಳಿಸಿದರು. ರಾಯಚೂರಿನಲ್ಲಿ ನಿನ್ನೆ ನಡೆದ ಶೂಟಿಂಗ್ ಸ್ಥಳದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಕೊಟ್ರೇಶಪ್ಪ ಕೋರಿ ಮತ್ತಿತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.  ‘ಶ್ರೀವಿಜಯದಾಸರು’ ಚಲನಚಿತ್ರದಲ್ಲಿ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ ಅವರ ಅಭಿನಯದ ಸುದ್ದಿ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.

One thought on “ಸಿನಿಮಾ ನಟನೆಗೆ ಮುಂದಾದ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ!

Comments are closed.