ಮಾನ್ವಿ: ಬಡ ಕುಟುಂಬಗಳಿಗೆ ನೆರವಾದ ಯುವ ಮುಖಂಡ ಎಂ.ಡಿ.ಬಾಬಾ

ರಂಜಾನ್: ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ
ಮಾನ್ವಿ ಏ.22: ಪಟ್ಟಣದ ಜಮೀರ್ ಅಹ್ಮದ್‌ಖಾನ್ ಅಭಿಮಾನಿಗಳ ಸಂಘದ ವತಿಯಿಂದ  ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್‌ಗಳನ್ನು ಶುಕ್ರವಾರ ವಿತರಿಸಲಾಯಿತು.

ಮಾನ್ವಿ ಪಟ್ಣಣದ ಫ್ರೆಂಡ್ಸ್ ಫಂಕ್ಷನ್ ಹಾಲ್ ನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಮೀರ್ ಅಹ್ಮದ್‌ಖಾನ್ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಡಿ.ಬಾಬಾ ಮಾತನಾಡಿ, ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ 101 ಬಡ ಕುಟುಂಬಗಳಿಗೆ ತಲಾ 5ಕೆಜಿ ಅಕ್ಕಿ, ತೊಗರಿ ಬೇಳೆ, ಅಡುಗೆ ಎಣ್ಣೆ , ಸಕ್ಕರೆ ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ಒಳಗೊಂಡಿರುವ ಕಿಟ್‌ಗಳನ್ನು ವಿತರಿಸಲಾಗುತ್ತಿದೆ’ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಎಂ.ಡಿ.ಮೋಹಿನ್ ಖಾನ್, ಮುಖಂಡರಾದ ಎಸ್.ಎಸ್.ಪಾಷಾ ಬಾಬುಲ್, ಆರ್.ಕೆ.ಈರಣ್ಣ, ರಾಘವೇಂದ್ರ ಚೌಡಕಿ, ಎಂ.ಡಿ.ಇಮಾಮ್ ಮತ್ತಿತರರು ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು.