ಮಾನ್ವಿ ಏ.17: ಭಾರತ ದೇಶ ಹಳ್ಳಿಗಳ ದೇಶ.ಗ್ರಾಮಗಳು ಉದ್ಧಾರವಾದರೆ,ದೇಶ ಉದ್ಧಾರವಾದಂತೆ.ಹಾಗಾಗಿ,ಗ್ರಾಮಗಳು ಸರ್ವಾಂಗೀಣ ಅಭಿವೃದ್ಧಿಆಗಬೇಕಾದರೆ,ಸಮುದಾಯದ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ಕಲ್ಮಠ ಕಾಲೇಜಿನ ಆಡಳಿತಾಧಿಕಾರಿ ಸಂಗಯ್ಯ ಸ್ವಾಮಿ ಹೇಳಿದರು. ಅವರು ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಹಾಗೂ ಕಲ್ಮಠ ಪದವಿ ಮಹಾವಿದ್ಯಾಲಯ ಇವರುಗಳ ಆಶ್ರಯದಲ್ಲಿ ಚೀಕಲಪರ್ವಿ ಗ್ರಾಮದಲ್ಲಿ ನಡೆದ ಅಮ್ರತ ಸಮುದಾಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತಾಡಿದರು.
ಕಲ್ಮಠ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಎಸ್.ಎಸ್. ಪಾಟೀಲರು ಅತಿಥಿ ಗಳಾಗಿ,ಶಿಬಿರಾರ್ಥಿಗಳು ನಿಸ್ವಾರ್ಥ ಸೇವೆ, ದೇಶ ಪ್ರೇಮ, ಭ್ರಾತ್ರತ್ವ ಭಾವನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.ಮುಳ್ಳೂರು ರುದ್ರಗೌಡ ಶ್ರಮದಾನದ ಧ್ವಜಾರೋಹಣ ಮಾಡಿದರೆ,ಮಲ್ಲನಗೌಡ ದಳಪತಿ ಶ್ರಮದಾನದ ಉದ್ಘಾಟನೆಯನ್ನು ನೆರವೇರಿಸಿದರು.
ಕಲ್ಮಠ ಪದವಿ ಕಾಲೇಜ್ ಪ್ರಾಚಾರ್ಯ ಸಿದ್ದನಗೌಡ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ದುರುಗಮ್ಮಹನುಮಂತ,ತಾಜುದ್ಧೀನ್,ಲಕ್ಷ್ಮೀ ಹನುಮಂತ, ಮರಿಯಮ್ಮಲಕ್ಷ್ಮಣ,ಸಬ್ಜಮ್ಮಖಾಸಿಂಸಾಬ್,ಮಲ್ಲಯ್ಯ,ಹುಸೇನಿ,ವಿಶ್ವ ನಾಥ ಇತರ ಗ್ರಾಮದ ಮುಖಂಡರು ವೇದಿಕೆಯಲ್ಲಿದ್ದರು.ಕಾರ್ಯ ಕ್ರಮದಲ್ಲಿ ಆನಂದ ಪ್ರಾರ್ಥನೆ ಮಾಡಿದರೆ, ಲಕ್ಷ್ಮೀ ಸಂಗಡಿಗರು ಎನ್.ಎನ್.ಎಸ್. ಧ್ಯೇಯಗೀತೆ ಹಾಡಿದರು.ಕಾರ್ಯಕ್ರಮಾಧಿಕಾರಿ ರಾಘವೇಂದ್ರ ಎಸ್.ಪ್ರಾಸ್ತಾವಿಕ ನುಡಿಗಳಾಡಿದರೆ,ಸಿದ್ಧಪ್ಪ ಪ್ರತಿಜ್ಞಾವಿಧಿ ಬೋಧಿಸಿದರು.ಬಸನಗೌಡ ಸ್ವಾಗತಿಸಿದರೆ, ಶಾರದಮ್ಮ ಕಾರ್ಯಕ್ರಮ ನಿರೂಪಿದರು.ಆನಂದ ಉಪ್ಪಳ ವಂದನಾರ್ಪಪಣೆ ಮಾಡಿದರು.