ಮಾನ್ವಿ ಏ.18: ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಸೇವಕರು ಗ್ರಾಮೀಣ ಪ್ರದೇಶಗಳಲ್ಲಿ ಮಾಡುವ ಶ್ರಮದಾನ ಹಾಗೂ ಜನಜಾಗೃತಿ ಕಾರ್ಯಕ್ರಮಗಳು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಂದು ತಿಳಿಸಿದರು.ಅವರು ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಹಾಗೂ ಕಲ್ಮಠ ಪದವಿ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಗೋರ್ಕಲ್ ದತ್ತುಗ್ರಾಮದಲ್ಲಿ ಜರುಗಿದ ‘ಅಮೃತ ಸಮುದಾಯದ ಅಭಿವೃದ್ಧಿ ಯೋಜನೆ’ ಅಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ”ಗ್ರಾಮೀಣಾಭಿವೃದ್ಧಿಯಲ್ಲಿ ಯುವಕರ ಪಾತ್ರ” ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಆಂಜನೇಯ ನಾಯಕ ಅವರು ಇಂದು ಯುವಕರು ದುಶ್ಚಟಗಳಿಗೆ ದಾಸರಾಗದೆ,ಉತ್ತಮ ಶಿಕ್ಷಣದಿಂದ ದೇಶದ ಆಸ್ತಿಯಾಗಬೇಕೆಂದು ಕಿವಿ ಮಾತು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪನ್ಯಾಸಕ ದೇವಪ್ಪ ದಿದ್ದಿಗಿ ವಹಿಸಿದ್ದರು.ಗ್ರಾಮ ಪಂಚಾಯತಿ ಅಧ್ಯಕ್ಷ ನರಸಪ್ಪ ಕಂಬಳೆತ್ತಿ,ಸದಸ್ಯರಾದ ವೆಂಕಟೇಶ, ಗೀಗೆಪ್ಪ,ನರಸಪ್ಪ,ಜಂಬಣ್ಣ,ವೆಂಕಣ್ಣ,ಗ್ರಾಮದ ಮುಖಂಡರಾದ ಚನ್ನಪ್ಪಗೌಡ,ಖಾನಸಾಬ್,ಯುವ ಮುಖಂಡ ಮಂಜುನಾಥ ವೇದಿಕೆಯಲ್ಲಿದ್ದರು.ಕಾರ್ಯಕ್ರಮದಲ್ಲಿ ಆನಂದ ಕುಮಾರ ಪ್ರಾರ್ಥಿಸಿದರೆ,ವಿಜಯ ಕುಮಾರ ಸ್ವಾಗತಿಸಿದರು. ಶಕೀಲಾ ಬೇಗಂ ನಿರೂಪಿಸಿದರೆ,ಈರಣ್ಣ ಕಾವಲಿ ವಂದಿಸಿದರು.
Post Views:
238