ರಾಯಚೂರು:ಸ್ಕೌಟ್, ಗೈಡ್ ಸಮವಸ್ತ್ರ ಮತ್ತು ಬೆಸಿಗೆ ಶಿಬಿರ ಪ್ರಮಾಣ ಪತ್ರ ವಿತರಣೆ

ರಾಯಚೂರು ಏ.13:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ಜಿಲ್ಲಾ ಸಂಸ್ಥೆ ರಾಯಚೂರು ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಸಂಘ (ರಿ) ಕಲಬುರಗಿ, ವಿಭಾಗ ಕಲಬುರಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗ ಮಟ್ಟದ ಸಮವಸ್ತ್ರ ವಿತರಣೆ ಹಾಗೂ ರಾಜ್ಯ ಮಟ್ಟದ ಬೇಸಿಗೆ ಶಿಬಿರದ ಕಂಠವಸ್ರ್ತ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಜಿಲ್ಲಾ ಸ್ಕೌಟ್ ಭವನದಲ್ಲಿ ಅಜೀಜಾ ಸುಲ್ತಾನ್ ಜಿಲ್ಲಾ ಮುಖ್ಯ ಆಯುಕ್ತರು ರಾಯಚೂರು ರವರ ಅಧ್ಯಕ್ಷತೆಯಲ್ಲಿ ಆಯೋಜನೆ ಮಾಡಲಾಗಿತ್ತು. ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಮೊದಲಿಗೆ ಹಿರಿಯ ಸ್ಕೌಟ್ ಮಾಸ್ಟರ್ ದಿ: ಕೃಷ್ಣಮೂರ್ತಿ ಯವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀನಿವಾಸ ನಂದಾಪುರ ನಿರ್ದೇಶಕರು ಕ.ಕ.ಮಾ.ಸಂ.ಅ.ಹಾಗೂ ಸಾ.ಸಂ(ರಿ) ಕಲಬುರಗಿ, ವಿಭಾಗ ಕಲಬುರಗಿ ಜಿಲ್ಲಾ ಘಟಕ ರಾಯಚೂರು ರವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗೋಪಾಲರೆಡ್ಡಿ ಮಾಜಿ ನಗರಾಭಿವೃದ್ಧಿ ಅಧ್ಯಕ್ಷರು ರಾಯಚೂರು, ಅತಿಥಿಗಳಾಗಿ ಚನ್ನ ನ ಗೌಡ ಪಾಟೀಲ್ ನಗರ ಶಾಸಕರ ಸಹೋದರರು, ಮಲ್ಲೇಶ್ವರಿ ಜೂಜರೇ ಎ.ಎಸ್.ಓ.ಸಿ ಹಾಗೂ ರೇಂಜರಿಂಗ್ ವಿಭಾಗ ಮತ್ತು ಕಲ್ಯಾಣ ಕರ್ನಾಟಕ ಉಸ್ತುವಾರಿ, ರುದ್ರಮುನಿ ರಾಜಗುರು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು ರಾಯಚೂರು, ರಂಗನಾಥ ಸ್ವಾಮಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳು ರಾಯಚೂರು, ಬಾಷಾ ಡಯಟ್ ಉಪನ್ಯಾಸಕರು ರಾಯಚೂರು ರವರು ಆಗಮಿಸಿದ್ದರು. ಬಸವರಾಜ ಬೋರೆಡ್ಡಿ ಜಿಲ್ಲಾ ಆಯುಕ್ತರು ಸ್ಕೌಟ್ ರವರು ಸ್ವಾಗತಿಸಿದರು . ಬಸವರಾಜ ಗದಗಿನ ಜಿಲ್ಲಾ ಕಾರ್ಯದರ್ಶಿಗಳು ರವರು ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ನಂತರ ಕಲ್ಯಾಣ ಕರ್ನಾಟಕ ಮೂಲ ತರಬೇತಿ ಶಿಬಿರ ಪಡೆದ ಶಿಕ್ಷಕರ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು ನಂತರ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಸ್ಕಾರ್ಫ್ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು ಮತ್ತು ಖಾಸಗಿ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ದಳನಾಯಕ/ನಾಯಕಿಯರಿಗೆ ಪ್ರೋತ್ಸಾಹ ಧನ ಚೆಕ್ ಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಆಲೀಯಾ ಖಾನಂ ಜಿಲ್ಲಾ ಆಯುಕ್ತರು ಗೈಡ್, ದಾನಮ್ಮ ಜಿಲ್ಲಾ ಖಜಾಂಚಿಗಳು, ಆರ್.ಎಚ್.ಸಾಗರ್ ಅಧ್ಯಕ್ಷರು ಸ್ಥಳೀಯ ಸಂಸ್ಥೆ ರಾಯಚೂರು, ಎನ್.ಶೇಖರ್ ಕಾರ್ಯದರ್ಶಿಗಳು ಸ್ಥಳೀಯ ಸಂಸ್ಥೆ ರಾಯಚೂರು, ರಂಗನಾಥ.ಸಿ ಕಾರ್ಯದರ್ಶಿಗಳು ಸ್ಥಳೀಯ ಸಂಸ್ಥೆ ದೇವದುರ್ಗ, ಬೀರಪ್ಪ ಶಂಭೋಜಿ ಜಿಲ್ಲಾ ಸಹಾಯಕ ಆಯುಕ್ತರು ಸ್ಕೌಟ್ ಸಿಂಧನೂರ, ಅಂಬಣ್ಣ ನಾಯಕ ಮ್ಯಾಕಲ್ ಎಸ್.ಜಿ.ವಿ/ಎಸ್.ಎಮ್.ಸಿ,ಉದಯ್ ಕುಮಾರ್ ಪತ್ತಾರ ತಾಂತ್ರಿಕ ಸಂಯೋಜಕರು, ನಾಗರತ್ನ ದೇಸಾಯಿ ಮಾನ್ವಿ ಸ್ಥಳೀಯ ಸಂಸ್ಥೆ, ಕಬ್ ಮಾಸ್ಟರ್, ಫ್ಲಾಕ್ ಲೀಡರ್, ಸ್ಕೌಟ್ಸ್ ಮಾಸ್ಟರ್, ಗೈಡ್ ಕ್ಯಾಪ್ಟನ್ ರವರು ಉಪಸ್ಥಿತರಿದ್ದರು . ಮನುಕುಮಾರಿ ಬಿ.ಎನ್ ಗೈಡ್ ಕ್ಯಾಪ್ಟನ್ ರವರು ನಿರೂಪಿಸಿ ವಂದಿಸಿದರು.