ಗಜಲ್ ಕಾವ್ಯ ಪ್ರಶಸ್ತಿಗೆ ಮಾನ್ವಿಯ ಉಮರ್ ದೇವರಮನಿ ಆಯ್ಕೆ

ಉಮರ್ ದೇವರಮನಿ

ಮಾನ್ವಿ ಏ.7: ಮಾನ್ವಿ ಪಟ್ಟಣದ ಕವಿ, ಉಪನ್ಯಾಸಕ ಉಮರ್ ದೇವರಮನಿ ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಗಜಲ್ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮದ ನಿಮಿತ್ತ ಕೋಮು ಸೌಹಾರ್ದಿತ ಮಠವೆಂದೇ ಪ್ರಸಿದ್ದಿಯಾದ ನರಗುಂದದ ಬೈರನಹಟ್ಟಿಯ ವಿರಕ್ತ ಮಠದ ಆವರಣದಲ್ಲಿ ಅಖಿಲ ಭಾರತ ಗಜಲ್ ಸಮ್ಮೇಳನವನ್ನು ಏ.17 ರವಿವಾರ ಏರ್ಪಡಿಸಲಾಗಿದೆ. ಗಜಲ್ ಕಾವ್ಯ ಕ್ಷೇತ್ರದಲ್ಲಿ ಉಮರ್ ದೇವರಮನಿ ಅವರು ಮಾಡಿರುವ ಸಾಧನೆಯನ್ನು ಪರಿಗಣಿಸಿ ಬೆಳ್ಳಿ ಸಂಭ್ರಮದ ಗಜಲ್ ಕಾವ್ಯ ಪ್ರಶಸ್ತಿಗೆ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿದೆ. ಆಖಿಲ ಭಾರತ ಗಜಲ್ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ
ಡಾ.ಅರ್ಜುನ ಗೊಳಸಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.