ರಾಯಚೂರು: ರಾಮನಗೌಡ ಏಗನೂರು ಅಭಿಮಾನಿಗಳ ಬಳಗ ವತಿಯಿಂದ ಡಾ. ಬಾಬು ಜಗಜೀವನರಾಮ್ ಅವರ ಪುತ್ಥಳಿಗೆ ಮಾಲಾರ್ಪಣೆ

ರಾಯಚೂರು ಏ.5: ದೇಶದ ಮಾಜಿ ಉಪಪ್ರಧಾನಿ, ಭಾರತ- ಪಾಕ್ ಯುದ್ಧ ಕಾಲದಲ್ಲಿ ರಕ್ಷಣಾ ಸಚಿವರಾಗಿ ಸಮರ್ಪಕವಾಗಿ ಕರ್ತವ್ಯ‌ ನಿರ್ವಹಿಸಿದ್ದ ಡಾ. ಬಾಬು ಜಗಜೀವನರಾಮ್ ಅವರ‌ ಕಾರ್ಯವೈಖರಿ ನೆನಪಿನಲ್ಲಿ ಉಳಿವಂತದ್ದು ಎಂದು ರಾಮನಗೌಡ ಏಗನೂರು ಅಭಿಮಾನಿ ಬಳಗ ಇಂದಿಲ್ಲಿ ನೆನಪಿಸಿಕೊಂಡಿತು.
ನಗರದಲ್ಲಿಂದು ಡಾ. ಬಾಬು ಜಗಜೀವನರಾಮ್ ಅವರ 115 ನೇ ಜನ್ಮ ದಿನಾಚರಣೆಯ ಅಗವಾಗಿ ರಾಮನಗೌಡ ಅಭಿಮಾನಿಗಳ ಬಳಗ ವತಿಯಿಂದ ಡಾ. ಬಾಬು ಜಗಜೀವನರಾಮ್ ಅವರ ಪುತ್ಥಳಿಗೆ ಮಾಲಾರ್ಪಣೆಗೈದು ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಬಾಪುಗೌಡ,
ವೈ.ರವಿಕಾಂತರೆಡ್ಡಿ, ಮೈಪಾಲ್ ರೆಡ್ಡಿ,ರಾಜಶೇಖರ ಮಾಚರ್ಲಾ,ಎ.ರಾಮು,ಕೀಶಣ್ ,ಚಂದ್ರು ಮೋಹನ ರೆಡ್ಡಿ,ರಮೇಶ್ ಪಾಟೀಲ್, ವೆಂಕಟೇಶ, ಸುಮಿತ್ರ,ಕಮಲಪುರ, ಬದ್ರಿ ಗೋನ್ವಾರ್ ಸೇರಿದಂತೆ ಅನೇಕರು ಇದ್ದರು.