ಮಾನ್ವಿ: ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘದಿಂದ ಕುಡಿಯುವ ನೀರಿನ ಅರವಟಿಗೆ : ಡಾ.ಶಂಕರಗೌಡ ಎಸ್.ಪಾಟೀಲ್ ಉದ್ಘಾಟನೆ

ಮಾನ್ವಿ ಮಾ.20: ಪಟ್ಟಣದ ಬಸವ ವೃತ್ತದಲ್ಲಿ ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತದ ವತಿಯಿಂದ ಕುಡಿಯುವ ನೀರಿನ ಅರವಟಿಗೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಶಂಕರಗೌಡ ಎಸ್ ಪಾಟೀಲ್ ಇಂದು ಉದ್ಘಾಟಿಸಿದರು . ಈ ಸಂದರ್ಭದಲ್ಲಿ ಮಾತನಾಡಿದ ಅವರು , ‘ಬೇಸಿಗೆ ಪ್ರಾರಂಭವಾಗಿರುವುದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೇಸಿಗೆಯಲ್ಲಿ ಸಾರ್ವಜನಿಕರ ನೆರವಿಗಾಗಿ ಸಂಸ್ಥೆಯ ವತಿಯಿಂದ ಕುಡಿಯುವ ನೀರಿನ ಅರವಟಿಗೆಯನ್ನು ಆರಂಭಿಸಲಾಗಿದೆ . ಇದೇ ರೀತಿ ಕೆಲವೇ ದಿನಗಳಲ್ಲಿ ಸಂಸ್ಥೆಯ ಇತರ ಶಾಖೆಗಳಾದ ಲಿಂಗಸೂಗುರು , ಸಿರವಾರ , ದೇವದುರ್ಗ , ರಾಯಚೂರು ನಗರಗಳಲ್ಲಿ ಆಗಮಿಸುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು’ ಎಂದರು. ಈ ಸಂದರ್ಭದಲ್ಲಿ ಸಂಘದ ಹಿರಿಯ ಸಲಹೆಗಾರದ ಎಸ್ . ಶರಣಪ್ಪ ನಿರ್ದೇಶಕರಾದ ವೀರನಗೌಡ , ಬಸವರಾಜ ಪಾಟೀಲ್, ಜೆ.ಸಂಗನಗೌಡ , ರೇವಣಸಿದ್ದಯ್ಯ ಹಿರೇಮಠ, ಮಂಜುನಾಥ ಕಮತರ, ಶಿವಕುಮಾರ ರಾಮದುರ್ಗ , ಕಾನೂನು ಸಲಹೆಗಾರರಾದ ವೀರನಗೌಡ ಪೋತ್ನಾಳ , ಮಲ್ಲಿಕಾರ್ಜುನ ಬಾಳೆ , ರಮೇಶಬಾಬು ಯಾಳಗಿ , ಮುಖ್ಯ ಕಾರ್ಯನಿರ್ವಾಹಕರಾದ ವೀರೇಶ ಎನ್ , ಹೊಸೂರು , ವ್ಯವಸ್ಥಾಪಕರಾದ ಚಂದ್ರಮೌಳೇಶ್ವರ , ಮೇಘರಾಜ, ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.