ಮಾನ್ವಿ: ಎಸ್‌.ಬಿ.ಐ(ಎಡಿಬಿ) ಶಾಖೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಮಾನ್ವಿ ಮಾ.8: ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ (ಎಡಿಬಿ) ಶಾಖೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ಸಾಲಗಳನ್ನು ವಿತರಿಸಲಾಯಿತು ರಾಯಚೂರಿನ ಪ್ರಧಾನ ಕಚೇರಿಯ ಚೀಫ್ ಮ್ಯಾನೇಜರ್ ರವೀಂದ್ರ ರತ್ನಾಕರ್ ಅವರು ಮಹಿಳಾ ಗ್ರಾಹಕರಿಗೆ ಸಾಲ ಪತ್ರಗಳನ್ನು ವಿತರಿಸಿದರು ಶಾಖೆಯ ಮ್ಯಾನೇಜರ್ ಯಲ್ಲಪ್ಪ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಶಾಖೆಯ ಮಹಿಳಾ ಸಿಬ್ಬಂದಿಗಳನ್ನು ಸನ್ಮಾನಿಸಿದರು.ಬ್ಯಾಂಕಿನ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.