ಮಾನ್ವಿ : ‘ಎದೆಯ ಕದ’ ಪುಸ್ತಕ ಲೋಕಾರ್ಪಣೆ

ಮಾನ್ವಿ ಫೆ28: ಕಲ್ಮಠದ ಧ್ಯಾನಮಂದಿರದಲ್ಲಿ ಆಯೋಜಿಸಿದ್ದ ಕಲ್ಮಠದ ಹಿರಿಯ ಪೂಜ್ಯರ ಹುಟ್ಟು ಹಬ್ಬದ ಅಮೃತಮಹೋತ್ಸವದ ಸಮಾರಂಭದಲ್ಲಿ ಸಾಹಿತಿ ರಮೇಶಬಾಬು ಯಾಳಗಿಯವರು ರಚಿಸಿದ ದ್ವಿಪದಿಗಳ ಸಂಕಲನ “ಎದೆಯ ಕದ” ಕೃತಿಯನ್ನು ಗಬ್ಬೂರು ಮಠದ ಶ್ರೀ ಬೂದಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಿದರು.

ಇದೇ ಸಂದರ್ಭದಲ್ಲಿ ಗ್ರಂಥ ದಾಸೋಹಿ ಸಂಗಮೇಶ ಕಾಯಣ್ಣೋರು ಅವರನ್ನು ಸನ್ಮಾನಿಸಲಾಯಿತು.
ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.ಕಲ್ಮಠದ ಹಿರಿಯ,ಕಿರಿಯ ಪೂಜ್ಯರು,
ಬಳ್ಳಾರಿಯ ಕಲ್ಯಾಣ ಮಠದ ಕಲ್ಯಾಣ ಮಹಾಸ್ವಾಮಿಗಳು, ನೀಲಗಲ್ ಮಠದ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು ಇನ್ನಿತರ ಮಠಗಳ ಪರಮ ಪೂಜ್ಯರು ಉಪಸ್ಥಿತರಿದ್ದರು.