ಮಾನ್ವಿ: ರಮೇಶಬಾಬು ಯಾಳಗಿಗೆ ಸದ್ಗುರು ವಿರೂಪಾಕ್ಷ ಶ್ರೀ ಕೃಪಾ ಭೂಷಣ ಪ್ರಶಸ್ತಿ ಪ್ರದಾನ

ಮಾನ್ವಿ ಫೆ28: ಮಾನ್ವಿ ಕಲ್ಮಠದ ಧ್ಯಾನಮಂದಿರದಲ್ಲಿ ಸೋಮುವಾರ ಆಯೋಜಿಸಿದ್ದ ಲಿಂಗೈಕ್ಯ ವಿರೂಪಾಕ್ಷ ಶಿವಾಚಾರ್ಯ ಮಹಾಸ್ವಾಮಿಗಳವರ ಪುಣ್ಯಾರಾಧನೆ ಹಾಗೂ ಕಲ್ಮಠದ ಹಿರಿಯ ಪೂಜ್ಯರ ಹುಟ್ಟು ಹಬ್ಬದ ಅಮೃತಮಹೋತ್ಸವ ಸಮಾರಂಭದಲ್ಲಿ ಸಾಹಿತಿ ರಮೇಶಬಾಬು ಯಾಳಗಿ ಅವರಿಗೆ ಸದ್ಗುರು ವಿರೂಪಾಕ್ಷ ಶ್ರೀ ಕೃಪಾ ಭೂಷಣ ಪ್ರಶಸ್ತಿ  ಪ್ರದಾನ ಮಾಡಲಾಯಿತು.

25 ಸಾವಿರ ರೂಪಾಯಿ ನಗದು,ಪ್ರಶಸ್ತಿ ಪತ್ರ,ಸ್ಮರಣಿಕೆ ನೀಡಿ ಯಾಳಗಿಯವರನ್ನು ಗೌರವಿಸಲಾಯಿತು.
ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರು, ಕಲ್ಮಠದ ಹಿರಿಯ ಮತ್ತು ಕಿರಿಯ ಪೂಜ್ಯರು, ನೀಲಗಲ್ ಮಠದ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ಬಳ್ಳಾರಿಯ ಕಲ್ಯಾಣ ಮಠದ ಕಲ್ಯಾಣ ಮಹಾಸ್ವಾಮಿಗಳು ,
ಗಬ್ಬೂರು ಮಠದ ಶ್ರೀ ಬೂದಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಇನ್ನಿತರ ಹಲವು ಪೂಜ್ಯರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.