ಮಾನ್ವಿ; ಫೆ.28ಕ್ಕೆ ರಮೇಶಬಾಬು ಯಾಳಗಿ ರಚಿಸಿದ ‘ಎದೆಯ ಕದ’ ಪುಸ್ತಕ ಲೋಕಾರ್ಪಣೆ

.                      ಮಾನ್ವಿ ಫೆ.19:ಪಟ್ಟಣದ ಕಲ್ಮಠ ಕಾಲೇಜಿನ ಉಪನ್ಯಾಸಕ ರಮೇಶಬಾಬು ಯಾಳಗಿಯವರು ರಚಿಸಿದ ದ್ವಿಪದಿಗಳ ಸಂಕಲನ “ಎದೆಯ ಕದ” ಪುಸ್ತಕವು ಫೆ 28 ರಂದು ಲೋಕಾರ್ಪಣೆಯಾಗಲಿದೆ.ಅಂದು ಸಂಜೆ 6-30 ಕ್ಕೆ ಕಲ್ಮಠದ ವತಿಯಿಂದ ಸಿಂಧನೂರು ರಸ್ತೆಯ ಧ್ಯಾನಮಂದಿರದಲ್ಲಿ ಆಯೋಜಿಸಿರುವ ರಾಯಚೂರು ಜಿಲ್ಲಾ ಸಂತ ಸಮಾವೇಶ ಹಾಗೂ ಕಲ್ಮಠದ ಹಿರಿಯ ಪೂಜ್ಯರ 75 ನೆಯ ವರ್ಷದ ಹುಟ್ಟು ಹಬ್ಬದ ಅಮೃತಮಹೋತ್ಸವದಲ್ಲಿ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.ಜಿಲ್ಲೆಯ ಹಲವು ಪೂಜ್ಯರು ಸಾನಿಧ್ಯ ವಹಿಸಲಿದ್ದಾರೆ.ಇದೆ ಸಂದರ್ಭದಲ್ಲಿ ಗ್ರಂಥ ದಾಸೋಹಿ ಸಂಗಮೇಶ ಕಾಯಣ್ಣೋರ ಇವರಿಗೆ ಸನ್ಮಾನ ಜರುಗಲಿದೆ ಎಂದು ಕಲ್ಮಠ ಕಾಲೇಜಿನ ಪ್ರಾಚಾರ್ಯ ಎಸ್‌.ಎಸ್. ಪಾಟೀಲ್ ಅವರು ತಿಳಿಸಿದ್ದಾರೆ.