ಆಲದ ಮರ ಮತ್ತು ಸುಂಟರಗಾಳಿ
ಮುಕ್ಕಣ್ಣ ಕರಿಗಾರ
ಸುಂಟರಗಾಳಿ ಬೀಸಿದರು ಎಷ್ಟೇ ಜೋರಾಗಿ
ಅಲುಗಾಡಬಹುದಲ್ಲದೆ ಆಲದ ಎಲೆಗಳು
ಉರುಳಿಸಲಾಗದು ಆಲದ ಮರವನ್ನು
ಲೆಕ್ಕಕ್ಕಿಲ್ಲದ ಧೂಳು ಕಸಕಡ್ಡಿಯ
ಚಿಮ್ಮಿ ಆಕಾಶಕ್ಕೆ
ಒಣಹುಲ್ಲು ಸವದೆ ಪುರುಲೆಗಳ
ಎತ್ತಿ ಒಯ್ದಂತೆ
ಕಿತ್ತಲಾಗದು ಆಲದ ಮರವನ್ನು.
ನೆಲದಿ ಆಳಕ್ಕಿಳಿದು
ಗಟ್ಟಿಗೊಂಡ ಬೇರು
ಮೈತುಂಬ ಇಳಿಬಿಟ್ಟುಕೊಂಡು ಬಿಳಲುಗಳ
ಗಟ್ಟಿಯಾಗಿ ನಿಂತ ಆಲದಮರವನ್ನು
ಎಷ್ಟು ಬೀಸಿದರೇನು ಉರುಳಿಸದು
ಸುಂಟರಗಾಳಿ.
ಬದುಕಲ್ಲಿ ಬೀಸುವುದು ಸಹಜ
ಸುಳಿ- ಸುಂಟರಗಾಳಿ.
ಒಣಪುರಲೆಗಳಾಗಬಾರದು ವಿಧಿಗೆ ಹೆದರಿ
ಆಲದಮರಂತೆ ಎದ್ದು ನಿಲ್ಲಬೇಕು
ಬಂದುದೆಲ್ಲವ ಎದುರಿಸಿ
ವಿಜಯಿಗಳಾಗಬೇಕು.
ಹೆದರಿದರೆ ನಾವು
ಆಟವಾಡಿಸುತ್ತದೆ ವಿಧಿ ನಮ್ಮನ್ನು
ಎದುರಿಸಿ ನಿಂತರೆ
ಹೆದರಿ ಓಡುತ್ತದೆ ವಿಧಿ !
ವಿಧಿಯನ್ನು ಎದುರಿಸಿ ನಿಲ್ಲುವ ಕೆಚ್ಚು
ಸಂಕಷ್ಟಗಳನ್ನು ಮೆಟ್ಟಿನಿಲ್ಲುವ ಆತ್ಮಸ್ಥೈರ್ಯ
ಇರಬೇಕು ನಮ್ಮಲ್ಲಿ ಆಗಬೇಕು ನಾವು
ಪುರುಷೋತ್ತಮರು
ಎಂದರೆ.

17.02.2022