ಅಧಿಕಾರಕ್ಕಿಂತ ಜನರ ಸೇವೆ ಮುಖ್ಯ- ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ ನಾಯಕ ಬೆಟ್ಟದೂರು

ವೀರೇಶ ನಾಯಕ ಬೆಟ್ಟದೂರು

ಮಾನ್ವಿ ಫೆ. 17:’ರಾಜಕೀಯದಲ್ಲಿ ಅಧಿಕಾರ ಶಾಶ್ವತವಲ್ಲ. ಅಧಿಕಾರಕ್ಕಿಂತ ಜನರ ಸೇವೆ ಮುಖ್ಯ’ ಎಂದು ಮಾನ್ವಿ ಪಟ್ಟಣದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ ನಾಯಕ ಬೆಟ್ಟದೂರು ಹೇಳಿದರು.
ಇಂದು ಮಾನ್ವಿ ಪಟ್ಟಣದ ನಗರ ಯೋಜನಾ ಪ್ರಾಧಿಕಾರದ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ ಸಾರ್ವಜನಿಕ ಬದುಕಿನಲ್ಲಿ ಅಧಿಕಾರ ಸಿಕ್ಕಾಗ ಜನರ ಸೇವೆಗಾಗಿ ಸದ್ಬಳಕೆ ಮಾಡಿಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ಮಾನ್ವಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷನಾಗಿ ಇಂದಿಗೆ ಎರಡು ವರ್ಷಗಳ ಅಧಿಕಾರ ಪೂರೈಸಿರುವ ನನಗೆ ಉತ್ತಮವಾಗಿ ಕೆಲಸ ಮಾಡಿರುವ ಸಂತೃಪ್ತಿ ಇದೆ. ಮಾನ್ವಿ ಪಟ್ಟಣದ ಅಭಿವೃದ್ಧಿಗಾಗಿ ಪ್ರಾಧಿಕಾರದ ವತಿಯಿಂದ ಸರ್ಕಾರದ ಯೋಜನೆ, ನಿಯಮಗಳ ಜಾರಿಯಲ್ಲಿ ಸಾರ್ವಜನಿಕರಿಗೆ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಒದಗಿಸಿದ ಸಂತೃಪ್ತಿ ಇದೆ. ಪಕ್ಷದ ವರಿಷ್ಠರು ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ‌ ನಿಭಾಯಿಸಿದ್ದೇನೆ’ ಎಂದು ಅವರು ಹೇಳಿದರು.
‘ ನನ್ನನ್ನು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲು ಕಾರಣೀಕರ್ತರಾದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವಾರಾಗಿದ್ದ ಸನ್ಮಾನ್ಯ ಬಿ.ಶ್ರೀರಾಮುಲು ಅವರು, ಸನ್ಮಾನ್ಯ ಸಂಸದ ರಾಜಾ ಅಮರೇಶ್ವರ ನಾಯಕ ಅವರು, ಸನ್ಮಾನ್ಯ ಶಾಸಕ ಕೆ.ಶಿವನಗೌಡ ನಾಯಕ ಅವರು ಸೇರಿದಂತೆ ಬಿಜೆಪಿ ಪಕ್ಷದ ಇತರ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಹಾಗೂ ಮಂಡಲ ಅಧ್ಯಕ್ಷರು, ಎಲ್ಲಾ ಪದಾಧಿಕಾರಿಗಳು, ಹಿರಿಯ ಹಾಗೂ ಕಿರಿಯ ಮುಖಂಡರಿಗೆ ಹಾಗೂ ಸಹಕಾರ ನೀಡಿದ ಮಾನ್ವಿಯ ಜನತೆಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಈ ಸಂದರ್ಭದಲ್ಲಿ ತಿಳಿಸಲು ಬಯಸುತ್ತೇನೆ’ ಎಂದು ಅವರು ನುಡಿದರು.
‘ ಮುಂಬರುವ ದಿನಗಳಲ್ಲಿ ಮಾನ್ವಿ ಪಟ್ಟಣ ಹಾಗೂ ತಾಲೂಕಿನಲ್ಲಿ ಬಿಜೆಪಿ ಪಕ್ಷದ ಸಂಘಟನೆ ಹಾಗೂ ಬೆಳವಣಿಗೆಗೆ ಶ್ರಮಿಸುವೆ’ ಎಂದು ಅವರು ತಿಳಿಸಿದರು.