ಚೀಕಲಪರ್ವಿ: ಶ್ರೀರುದ್ರಮುನೀಶ್ವರ ಶಾಲೆಯ ನೂತನ ಕಟ್ಟಡದ ಉದ್ಘಾಟನೆ- ಗಿರಿಧರ ಪೂಜಾರ ಶೈಕ್ಷಣಿಕ ಸೇವೆಗೆ ಮಠಾಧೀಶರ ಮೆಚ್ಚುಗೆ

ಮಾನ್ವಿ ಫೆ.06: ಕೇವಲ ಅಂಕಗಳಿಗೆ ಸೀಮಿತವಾಗದೆ, ಶಿಕ್ಷಣ ಮಕ್ಕಳಲ್ಲಿ ಶಿಸ್ತು , ವಿನಯ , ಪ್ರಾಮಾಣಿಕತೆ, ನೈತಿಕತೆಯಂತಹ ಜೀವನ ಮೌಲ್ಯಗಳನ್ನು ಕಲಿಸಬೇಕು ಎಂದು ಚೀಕಲಪರ್ವಿಯ ಅಭಿನವ ರುದ್ರಮುನಿ ಮಹಾಸ್ವಾಮಿಗಳು ಹೇಳಿದರು. ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಶ್ರೀ ರುದ್ರಮುನೀಶ್ವರ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಸಾಮಾಜಿಕ ಪರಿವರ್ತನೆಯ ಬುನಾದಿ . ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಿರಿಧರ ಪೂಜಾರಿಯವರ ಕಾರ್ಯ ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಮ.ನಿ.ಪ್ರ.ಅಭಿನವ ರುದ್ರಮುನಿ ಮಹಾಸ್ವಾಮಿಗಳು ಸುಕ್ಷೇತ್ರ ಚೀಕಲಪವಿ೯, ಶ್ರೀ ಮ.ನಿ.ಪ್ರ.ಮಹಾಲಿಂಗ ಮಹಾಸ್ವಾಮಿಗಳು ಯದ್ದಲದೊಡ್ಡಿ,ಶ್ರೀ ಮ.ನಿ.ಪ್ರ.ಶಂಕರರಾಜೇಂದ್ರ ಮಹಾಸ್ವಾಮಿಗಳು ಅಮೀನಗಡ, ಶ್ರೀ ಮ.ನಿ.ಪ್ರ.ಪ್ರಭುಲಿಂಗೇಶ್ವರ ಮಹಾಸ್ವಾಮಿಗಳು ಸೋಮಶೇಖರ ಮಠ ಮುನವಳ್ಳಿಶ್ರೀ ಮ.ನಿ.ಪ್ರ.ಮರಿಸಿದ್ದಬಸವ ಮಹಾಸ್ವಾಮಿಗಳು ಬಳಗಾನೂರು, ಶ್ರೀ ಪೂಜ್ಯ ಅನ್ನದಾನ ದೇವರು ಉತ್ತರಾಧಿಕಾರಿಗಳು ಶ್ರೀ ರುದ್ರಮುನೀಶ್ವರ ಮಠ ಚೀಕಲಪವಿ೯,ಖೇಡಗಿಯ ಪರಮಪೂಜ್ಯರು ಶಾಲೆಯ ತರಗತಿ ಕೊಠಡಿಗಳನ್ನು ಉದ್ಘಾಟಿಸಿದರು.ಸಂಸ್ಥೆಯ ಅಧ್ಯಕ್ಷರಾದ  ಗಿರಿಧರ ಪೂಜಾರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯೋಪಾಧ್ಯಾಯ ಮೌಲಪ್ಪ ನಿರೂಪಿಸಿದರು, ಮಹಾಂತಮ್ಮ ಶಿಕ್ಷಕರು ಸ್ವಾಗತಿಸಿ ವಂದಿಸಿದರು. ಕಾಯ೯ಕ್ರಮದದಲ್ಲಿ ಗ್ರಾಮದ ಗುರುಹಿರಿಯರನ್ನು ಸನ್ಮಾನಿಸಲಾಯಿತು.