ಕಲ್ಯಾಣ ಕಾವ್ಯ : ನಾಳಿನ ಚಿಂತೆ ಬೇಡ- ಮುಕ್ಕಣ್ಣ ಕರಿಗಾರ

ನಾಳಿನ ಚಿಂತೆ ಬೇಡ

ಮುಕ್ಕಣ್ಣ ಕರಿಗಾರ

ಏನಾಗಬಹುದು ನಾಳೆ ?
ನಾಳೆ ಏನಾಗಬಹುದು ?
ಏನೂ ಆಗಬಹುದು ನಾಳೆ !
ಬೇಡ ನಾಳೆಯ ಚಿಂತೆ.

ಇಂದನ್ನು ಬದುಕಿ
ನಾಳೆ ಬಂದಾಗ ನೋಡಿದರಾಯ್ತು
ವರ್ತಮಾನ ನಮಗೆ ಮುಖ್ಯವಾಗಬೇಕು
ಭವಿಷ್ಯದ ಚಿಂತೆಯಲ್ಲಿ ಕಳೆದುಕೊಳ್ಳಲಾಗದು
ವರ್ತಮಾನದ ಆನಂದ.

ಇಲ್ಲಿ ಎಲ್ಲಕ್ಕೂ ಎಲ್ಲರಿಗೂ
ಕಾಲ ಮೂರುಂಟು
ಭೂತ ಕಳೆದುಹೋಗಿದೆ
ಭವಿಷ್ಯ ಕಲ್ಪನೆಗೆಟುಕದು
ಏನಾದರೇನು ,ಬದುಕಿದರಾಯ್ತು ಇಂದನ್ನು.

ಇಂದು ಬದುಕಲರಿಯದೆ ಬರಲಿರುವ
ಸುಂದರ ದಿನಗಳಿಗಾಗಿ ಕಾಯ್ವುದು ವ್ಯರ್ಥ
ಆಯುಷ್ಯವೇನೂ ಖಾತ್ರಿ ಇಲ್ಲ !
ಜೀವನವೆಂಬುದು ಗಾಳಿಯಲ್ಲಿ ಹಾರಿಬಿಟ್ಟ ಬಲೂನು !

ಬದುಕಿದರೆ ಸರಿಯಾಗಿ ಇಂದು
ಗೆಲ್ಲಬಹುದು ನಾಳೆ
ಇಂದು ಬದುಕಲರಿಯದೆ ನಾಳೆಗಳ ಕನಸು ಕಾಣ್ವುದು ಅರ್ಥವಿಲ್ಲದ್ದು.

ಬಂದೇಬರಲಿರುವ ನಾಳೆಗಳಿಗಾಗಿ
ಇಂದಿನ ಸುಖ,ಆನಂದಗಳ ತ್ಯಾಗಮಾಡಲಾಗದು
ನಾಳೆ ಹೇಗಾದರಾಗಲಿ
ಬದುಕೋಣ ಇಂದು ಆನಂದದಿಂದ

ಮುಕ್ಕಣ್ಣ ಕರಿಗಾರ

01.02.2022