ಯೋಚಿಸು ನೀನೇನಾಗಬೇಕೆಂಬುದನು
ಮುಕ್ಕಣ್ಣ ಕರಿಗಾರ
ಯಾರು ಏನಾದರೇನು
ಯಾರು ಎಲ್ಲಿಗೆ ಬಂದರೇನು
ಯೋಚಿಸು ಮೊದಲು ಏನಾಗಬೇಕು
ನೀನು ಎಂಬುದನು.
ಸುತ್ತುತ್ತಿರುವ ಪ್ರಪಂಚವಿದು
ನಿಲ್ಲದು ನಿಂತಲ್ಲಿಯೆ
ಮೇಲಿದ್ದವರು ಕೆಳಗೆ
ಕೆಳಗಿದ್ದವರು ಮೇಲೆ ಬರಲೇಬೇಕು
ಅವರು ಇವರು ಬಂದುಕುಳಿತ
ಖುರ್ಚಿಗಳ ಬಗೆಗೇಕೆ ಕಳವಳ ?
ಎಲ್ಲರಿಗು ಮಿಗಿಲು ಎತ್ತರದ
ಸ್ಥಾನಕ್ಕೇರುವ ಕನಸು ಕಾಣು
ಕನಸುಗಳಿಗೆ ಬಣ್ಣತುಂಬು
ಹರಿಯಬಿಡು ಮಹತ್ವಾಕಾಂಕ್ಷೆಯ
ಹಕ್ಕಿಯನು ರೆಕ್ಕೆಬಡಿದು ಹಾರಲು
ಆಕಾಶದುದ್ದಕ್ಕು.ಗೆಲುವು ನಿನಗುಂಟು.
ರೂಪಿಸುವುದಿಲ್ಲ ಇಲ್ಲಿ ಯಾರೂ ಯಾರ ಬಾಳನ್ನು
ನೀನೇ ನಿನ್ನ ಬಾಳಶಿಲ್ಪಿ
ನಿನ್ನ ಉದ್ಧಾರವು ನಿನ್ನ ಕೈಯ್ಗಳಲ್ಲೆ !
ನಿನ್ನ ನೀನರಿ! ಮುಂದೆನಡೆ!
ಒಂದಡಿಯ ಗಟ್ಟಿತನದಿ ಮುಂದಿಡೆ ನೀನು
ಮುಂದೆಬರುವಳು ಅದೃಷ್ಟದೇವಿ
ಹತ್ತು ಅಡಿಗಳನ್ನಿಟ್ಟು ನಿನ್ನೆಡೆಗೆ
ಇಡು ನೀನು ಮೊದಲು ಹೆಜ್ಜೆ,ನಡೆ ಮುಂದೆ,ಮುನ್ನುಗ್ಗು,ಗೆಲುವು ನಿನ್ನದೆ !

31.01.2022