ಸಾಧನೆಗೆ ನಿರಂತರ ಅಧ್ಯಯನ, ಪರಿಶ್ರಮ ಅಗತ್ಯ: ಮಹಾದೇವ ಪಂಚಮುಖಿ

ಮಾನ್ವಿ ಜ.30: ನಿರಂತರ ಅಧ್ಯಯನ ಹಾಗೂ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ಮಾನ್ವಿ ಪೋಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್  ಮಹಾದೇವ ಪಂಚಮುಖಿ ಹೇಳಿದರು. ಇಂದು ಮಾನ್ವಿಯ ಏಕಲವ್ಯ ಸ್ಟಡಿ ಸರ್ಕಲ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ದ ವತಿಯಿಂದ ಹಮ್ಮಿಕೊಂಡಿದ್ದ ‘ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರ’ ವನ್ನು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾವು ಗ್ರಾಮೀಣ ಪ್ರದೇಶದವರು ಎಂದು ಕೀಳಿರಿಮೆ ಇರಬಾರದು. ಮನುಷ್ಯ ಮನಸ್ಸು ಮಾಡಿದರೆ ಏನಾನ್ನದರು ಸಾಧಿಸಬಲ್ಲನು. ಯಾವುದೇ ಪರೀಕ್ಷೆಗಳನ್ನು ಭಯವಿಲ್ಲದೆ ಆತ್ಮಸ್ಥೈರ್ಯದಿಂದ ಎದುರಿಸಬೇಕು.ಸಿಕ್ಕಿರುವ ಸಮಯವನ್ನು ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು ಜೊತೆಗೆ ಕಷ್ಟವಾದ ವಿಷಯಗಳಿಗೆ ಹೆಚ್ಚು ಒತ್ತು ಕೊಡಬೇಕು. ಉತ್ತಮ ವ್ಯಕ್ತಿತ್ವ ಹೊಂದಿ ಉನ್ನತ ಸಾಧನೆ ಮಾಡಬೇಕು ಎಂದು ಅವರು ಹೇಳಿದರು. ಶಿಕ್ಷಕ ಗೋಪಾಲ ನಾಯಕ ಜೂಕೂರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸತತ ಪ್ರಯತ್ನ ಮತ್ತು ಸಾಧಿಸುವ ಹಂಬಲ ಇದ್ದವರು ಎಂತಹ ಸಾಧನೆಯನ್ನು ಮಾಡಬಲ್ಲರು ಎಂದು ಹೇಳಿದರು.
ಸಂದರ್ಭದಲ್ಲಿ ಉಪನ್ಯಾಸಕರಾದ ಶರಣಬಸವ, ದೇವೇಂದ್ರ ಬಾಗಲವಾಡ, ಮಹೇಶ್ , ಹಾಗೂ ವ್ಯವಸ್ಥಾಪಕರಾದ ರವಿಚಂದ್ರ ಈರಣ್ಣ ನಾಯಕ ಕಾರ್ಯಾಗಾರದ ಆಯೋಜಕಾರದ ಚಂದ್ರು ಯೋದನಾಯಕ ಕರಡಿಗುಡ್ಡ ಹಾಗೂ ಸ್ಪರ್ಧಾರ್ಥಿಗಳು ಹಾಜರಿದ್ದರು.