ಗುಲಬರ್ಗಾ ವಿಶ್ವವಿದ್ಯಾಲಯದ ಕಥಾ ಸ್ಪರ್ಧೆಯಲ್ಲಿ ಸಾಹಿತಿ ಡಾ.ಗವಿಸಿದ್ದಪ್ಪ ಎಚ್.ಪಾಟೀಲ್ ಅವರ ಕಥೆಗೆ ಬಹುಮಾನ

ಬೀದರ್.ಜ.18: ಗುಲ್ಬರ್ಗಾ ವಿಶ್ವ ವಿದ್ಯಾಲಯದ ರಾಜ್ಯೋತ್ಸವ ನಿಮಿತ್ಯ ಏರ್ಪಡಿಸಿದ ದಿ.ಜಯತೀರ್ಥ ರಾಜಪುರೋಹಿತ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಬೀದರ್ ನ ಸಾಹಿತಿ- ಕಥೆಗಾರ ಡಾ.ಗವಿಸಿದ್ಧಪ್ಪ ಎಚ್.ಪಾಟೀಲ್ ಅವರ ‘ಹೂ ಚಿವುಟದಿರಿ’ ಕಥೆ ಬೆಳ್ಳಿ ಪದಕ ಮತ್ತು ನಗದು ಬಹುಮಾನಕ್ಕೆ ಆಯ್ಕೆಯಾಗಿದೆ. ಕಾರಣ ಇಂದು ಹುಮ್ನಾಬಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವೀರಣ್ಣ ತುಪ್ಪದ,ಕಾಂಗ್ರೆಸ್ ಮುಖಂಡ ಪ್ರಭುರಾವ ತಾಳ ಮಡಗಿ ಸನ್ಮಾನಿಸಿದರು.ಡಾ.ರೂತಾ, ಡಾ.ರವಿ ಬೌದ್ಧೆ, ಪ್ರಕಾಶ, ಡಾ.ಜಯದೇವಿ ಗಾಯಕವಾಡ ಇದ್ದರು.