ಮಾನ್ವಿ: ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಹೋರಾಟಕ್ಕೆ ಎಸ್ಐಒ ಸಂಘಟನೆ ಬೆಂಬಲ

ಅತಿಥಿ ಉಪನ್ಯಾಸಕರ ಬೇಡಿಕೆಗಳ ಈಡೇರಿಕೆಗೆ ಎಸ್‌ಐಒ ಸಂಘಟನೆ ಮನವಿ
ಮಾನ್ವಿ.ಜ.5: ಸರ್ಕಾರಿ ಪ್ರಥಮ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸ್ಟೂಡೆಂಟ್ಸ್ ಇಸ್ಮಾಮಿಕ್ ಆರ್ಗನೈಜೇಶನ್ (ಎಸ್‌ಐಒ) ಸಂಘಟನೆಯ ಕಾರ್ಯಕರ್ತರು ಬುಧವಾರ ಮಾನ್ವಿ ತಹಶೀಲ್ದಾರ್ ಪರಶುರಾಮ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಭೋದನಾ ತರಗತಿಗಳನ್ನು ತೊರೆದು ಪ್ರತಿಭಟಿಸುತ್ತಿದ್ದಾರೆ, ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಬಹಳಷ್ಟು ನಷ್ಟವಾಗಲಿದೆ. ಬೋಧನೆ ಹಾಗೂ ಕಲಿಕೆಯು ವಿಳಂಬವಾದರೆ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯಕ್ರಮದ ಮೇಲೆ ಪ್ರಭಾವ ಬೀರುವ ಸಂಭವವಿದೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನಕ್ಕೆ ಅನಾನುಕೂಲವಾಗಲಿದೆ. ಕಾರಣ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ  ಗೌರವಧನ ಹೆಚ್ಚಳದ ಜೊತೆಗೆ ಉದ್ಯೋಗ ಭದ್ರತೆ ನೀಡಬೇಕು. ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ ವ್ಯಕ್ತಿಗಳ ಸೇವೆಯನ್ನು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ವಿಲೀನಗೊಳಿಸಬೇಕು ಅಥವಾ ಸೇವೆ ಸಕ್ರಮಗೊಳಿಸಬೇಕು.ಸರ್ಕಾರಿ ಕಾಲೇಜುಗಳಲ್ಲಿನ ಕಾರ್ಯಾಭಾರಕ್ಕೆ ಅನುಗುಣವಾಗಿ ಉಪನ್ಯಾಸಕರನ್ನು ನೇಮಕ ಮಾಡಿಕೊಳಬೇಕು ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಲಾಯಿತು.
ಎಸ್‌ಐಒ ಸಂಘಟನೆಯ ಸ್ಥಳೀಯ ಘಟಕದ ಅಧ್ಯಕ್ಷ ಸಮೀರ್ ಪಾಷಾ, ಕಾರ್ಯದರ್ಶಿ ಮುಹಮ್ಮದ್ ಯಾಸೀನ್ , ಇತರ ಪದಾಧಿಕಾರಿಗಳಾದ  ಮುಹಮ್ಮದ್ ಇಬ್ರಾಹಿಂ,ಜುಬೇರ್ ಖಾನ್,  ಮುಹಮ್ಮದ್ ಅಶ್ಫಾಕ್, ಅತೀಕ್, ಜಿಯಾರುಲ್ ಇಸ್ಲಾಂ,ಅಬ್ದುಲ್ ಅಜೀಜ್, ಜಿಶಾನ್ ಆಖಿಲ್ ಸಿದ್ದಿಖಿ,ಅಬ್ದುಲ್ ಖೈಯುಮ್, ಜಮಾತೇ ಇಸ್ಲಾಮಿ ಹಿಂದ್  ಅಧ್ಯಕ್ಷ ಅಬ್ದುಲ್ ಕರೀಮ್ ಖಾನ್, ಉಪಾಧ್ಯಕ್ಷ ಅಬ್ದುಲ್ ರಹ್ಮಾನ್, ಸೈಫ್ , ನಾಸಿರ್ ಅಲಿ, ಚಾಂದ್ ಟೈಲರ್, ಚಂದ್ ಪಾಷಾ, ಜಬ್ಬಾರ್  ಖುರೈಶಿ, ಮಹಮ್ಮದ್ ಆರಿಫ್, ಇಮ್ತಿಯಾಜ್ ಹುಸೇನ್, ಇಶ್ರಾದ್ ಖಾನ್, ಮತ್ತಿತರರು ಇದ್ದರು.