ಮಾನ್ವಿ::ಎಸ್‌ಐಒ ಸಂಘಟನೆಯ ಅಧ್ಯಕ್ಷರಾಗಿ ಸಮೀರ್ ಪಾಷಾ ಆಯ್ಕೆ

ಸಮೀರ್ ಪಾಷಾ

ಮಾನ್ವಿ. ಜ.04: ಸ್ಟೂಡೆಂಟ್ಸ್ ಇಸ್ಮಾಮಿಕ್ ಆರ್ಗನೈಜೇಶನ್ (ಎಸ್‌ಐಒ) ಸಂಘಟನೆಯ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಸಮೀರ್ ಪಾಷಾ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಯಾಸಿನ್ ಆಯ್ಕೆಯಾಗಿದ್ದಾರೆ. ಪಟ್ಟಣದ ಎಸ್‌ಐಒ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ  ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಇತರ ಪದಾಧಿಕಾರಿಗಳ ವಿವರ: ಮುಹಮ್ಮದ್ ಇಬ್ರಾಹಿಂ (ಕ್ಯಾಂಪಸ್ ಕಾರ್ಯದರ್ಶಿ), ಜಿಯಾರುಲ್ ಇಸ್ಲಾಂ (ಜನಸಂಪರ್ಕ ಕಾರ್ಯದರ್ಶಿ), ಅಜರ್ ಮನ್ಸೂರಿ (ದಾವಾ ಕಾರ್ಯದರ್ಶಿ), ಮುಹಮ್ಮದ್ ಮಹೆಬೂಬ್ (ಐಸಿಸಿ ಕಾರ್ಯದರ್ಶಿ), ಮುಹಮ್ಮದ್ ಅಶ್ಫಾಕ್ ( ಬೈತುಲ್-ಮಾಲ್), ಸಮೀರ್ ಮನ್ಸೂರಿ (ಕಲೆ ಮತ್ತು ಸಂಸ್ಕೃತಿ ವೇದಿಕೆ), ಜುಬೇರ್ ಖಾನ್ (ಮಾಧ್ಯಮ ವಿಭಾಗ), ಮಿರ್ಜಾ ಮುಜಕ್ಕಿರ್ ಬೇಗ್ ಹಾಗೂ ಸಾದತುಲ್ಲಾ ಸಾದ್ (ಕಾರ್ಯಾಲಯ ವ್ಯವಸ್ಥಾಪಕರು).