ಮಾನ್ವಿ. ಡಿ.31: ತಾಲ್ಲೂಕಿನಲ್ಲಿ ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವನಸಿರಿ ಫೌಂಡೇಶನ್ ಸಂಸ್ಥೆಯ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ನೂತನ ತಾಲೂಕು ಪದಾಧಿಕಾರಿಗಳನ್ನಾಗಿ ಶರಣಬಸವ ಭೋವಿ ಹಿರೇಕೊಟ್ನೇಕಲ್ (ಅಧ್ಯಕ್ಷ),ಬಸವರಾಜ ನಸಲಾಪುರ (ಉಪಾಧ್ಯಕ್ಷ) ಹಾಗೂ ವೀರೇಶ ಪಿರುಮಾಳ (ಕಾರ್ಯದರ್ಶಿ) ಅವರನ್ನು ನೇಮಕ ಮಾಡಲಾಯಿತು. ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿದರು. ಸಂಸ್ಥೆಯ ಇತರ ಪದಾಧಿಕಾರಿಗಳಾದ ಶರಣೇಗೌಡ, ಶಂಕರಗೌಡ ಎಲೆಕೂಡ್ಲಿಗಿ, ಮಹಾಂತೇಶ ರೌಡಕುಂದ, ಪ್ರಕಾಶ ಸ್ವಾಮಿ, ರಮೇಶ ಕುನ್ನಟಗಿ, ವಿಶ್ವನಾಥ ಪಾಟೀಲ್ ಹರ್ವಾಪುರ, ವೀರಭದ್ರಯ್ಯ ಸ್ವಾಮಿ ತಿಮ್ಮಾಪುರ, ಮುದಿಯಪ್ಪ ಹೊಸಳ್ಳಿ, ಮಹಾಂತೇಶ ಸಿಂಧನೂರು, ರಂಜಿತ್ ಕುಮಾರ ಮಾನ್ವಿ ಇದ್ದರು.