ಮಾನ್ವಿ. ಡಿ.31: ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಇಂದು ನವಸ್ಪೂರ್ತಿ ಸೌಹಾರ್ದ ಸಹಕಾರಿ ನಿಯಮಿತದ ವತಿಯಿಂದ 2022 ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷರಾದ ಹನುಮೇಶನಾಯಕ ಜೀನೂರು, ಉಪಾಧ್ಯಕ್ಷರಾದ ಅಮರೇಗೌಡ ಹಿರೇಕೋಟ್ನೆಕಲ್, ನಿರ್ದೇಶಕರುಗಳಾದ ವಿನೋದ್ ಕುಮಾರ್ ಜವಳಿ, ಸಣ್ಣ ಹನುಮಪ್ಪ ನಲಗಂದಿನ್ನಿ, ದೇವರಾಜ ಕಟ್ಟಿಕರ್ ದಿದ್ದಿಗಿ, ಸದಸ್ಯರುಗಳಾದ ಪ್ರಕಾಶ್ ಹಿರೇಮಠ, ಮಂಜುನಾಥ್ ವಡವಟ್ಟಿ, ಮುಖ್ಯ ಕಾರ್ಯನಿರ್ವಾಹ ಕ ಅಧಿಕಾರಿ ದೇವರಾಜ. ಸಿಬ್ಬಂದಿಗಳಾದ ಹನುಮೇಶ್ ದೇವಿಪುರ, ಅಮರೇಶ್ ಯಾಪಲಪರ್ವಿ ಇದ್ದರು.