ಕೇಂದ್ರಕ್ಕೆ ಸಮಾನವಾದ ವೇತನ, ಭತ್ಯೆಗೆ ಒತ್ತಾಯ
ಮಾನ್ವಿ .ಡಿ.29: ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾದ ವೇತನ ಮತ್ತು ಭತ್ಯೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮಾನ್ವಿಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನೂತನ ಪಿಂಚಣಿ ಯೋಜನೆಯನ್ನು ಕೈಬಿಡಬೇಕು. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಹುದ್ದೆಗಳನ್ನು ಹೆಚ್ಚಿಸಬೇಕು. ಗ್ರಾಮೀಣ ಕೃಪಾಂಕ ಶಿಕ್ಷರಿಗೆ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಣಯಗಳಂತೆ ಸೌಲಭ್ಯ ನೀಡಬೇಕು. ವೇತನ ಆಯೋಗ ನೀಡಿದ ವರದಿಯಂತೆ ವೇತನ ಹೆಚ್ಚಿಸಬೇಕು. ಹಾಗು ಶಿಕ್ಷಕರ ವರ್ಗಾವಣೆ ನೀತಿಯಲ್ಲಿ ಗೊಂದಲಗಳನ್ನು ಸರಿಪಡಿಸಬೆಕು. ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು. ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘದ ತಾಲೂಕ ಅಧ್ಯಕ್ಷ ಶ್ರೀಶೈಲಗೌಡ, ಕಾರ್ಯದರ್ಶಿ ಹಂಪಣ್ಣ ಚಂಡೂರು, ಖಜಾಂಚಿ ಯಂಕಣ್ಣ ಶೆಟ್ಟಿ, ಗೌರವಾಧ್ಯಕ್ಷ ಸುರೇಶ ಕುರ್ಡಿ, ಮೂಕಪ್ಪ ಕಟ್ಟಿಮನಿ, ಹನುಮಂತಪ್ಪ ಭಂಡಾರಿ, ಸಂಗಮೇಶ ಮುದೋಳ, ಮಹಾದೇವಪ್ಪ, ಸುರೇಶ ಗೋರ್ಕಲ್, ನಾರಾಯಣಪ್ಪ, ಅಶೋಕ ಎಂ, ಸುಧಾಕರ, ಸತೀಶ, ಹಂಪನಗೌಡ, ಬಸವರಾಜ, ಹನುಮಂತರಾವ್ ಕುಲಕರ್ಣಿ, ಇಸಾಕ್ , ಜಲ್ಲಿ ಹನುಮಂತಪ್ಪ. ಶಾಹೀನಾ ಬೇಗಂ, ಸಿದ್ದಲಿಂಗೇಶ್ವರ, ಶ್ರೀಕಾಂತ್ ಬಾಗೇವಾಡಿ, ತಿಮ್ಮೇಶ ಮತ್ತಿತರರು ಇದ್ದರು.