ಭಾನುವಾರದ ಗಜಲ್ ಘಮಲು-ಮಂಡಲಗಿರಿ ಪ್ರಸನ್ನ

ಗಜಲ್

     *ಮಂಡಲಗಿರಿ ಪ್ರಸನ್ನ

ಒಡೆದ ಕನ್ನಡಿ ಚೂರುಗಳ ಸೇರಿಸಲು ಹೋದೆ
ಮುರಿದ ಮನಸುಗಳನು ಕೂಡಿಸಲು ಹೋದೆ

ರಕ್ತ ಸಂಬಂಧಗಳು ಹಳಸಿ ಹೋದ ಕಾಲವಿದು
ಮುಖದ ಸತ್ತನಗುವಿಗೆ ಜೀವತುಂಬಲು ಹೋದೆ

ಪ್ರೀತಿ ಅಂತಃಕರಣ ಅಂಗಡಿಗಳಲಿ ಸಿಗುತ್ತಿಲ್ಲ
ಒಳಗಣ್ಣ ಕತ್ತಲೆಗೆ ಬೆಳಕು ಮೂಡಿಸಲು ಹೋದೆ

ಅನುಮಾನ ಆತಂಕದಲೆ ಬದುಕು ಸವೆಯಿತು
ಅಪ್ಪಟ ಬಂಗಾರ ಅರಸಿ ಒರೆಹಚ್ಚಲು ಹೋದೆ

ನವಿರು ಭಾವನೆಗಳೆಲ್ಲ ಹರಿದು ಹೋಗಿವೆ ‘ಗಿರಿ’
ಮನುಷ್ಯ ಸಂಬಂಧಗಳ ಹೊಲೆಯಲು ಹೋದೆ

ಮಂಡಲಗಿರಿ ಪ್ರಸನ್ನ, ರಾಯಚೂರು
ಮೊ:9449140580