ಭಾನುವಾರದ ಗಜಲ್ ಘಮಲು – ಮಂಡಲಗಿರಿ ಪ್ರಸನ್ನ

ಗಜಲ್

– ಮಂಡಲಗಿರಿ ಪ್ರಸನ್ನ

ಯಾಕೊ ಅವಳು ಮಾತಾಡುತ್ತಿಲ್ಲ ಮೌನ ಆವರಿಸಿತೇಕೆ
ವೀಣೆ ಮೀಟಿದರೂ ನುಡಿಯುತ್ತಿಲ್ಲ ಮೌನ ಆವರಿಸಿತೇಕೆ

ಕಾಲದನಂಟು ನೂರುಬೇಗುದಿಯ ತಳಮಳ ಇರಬೇಕು
ಚೆಂಬೆಳಕ ಕೋಗಿಲೆ ಹಾಡುತ್ತಿಲ್ಲ ಮೌನ ಆವರಿಸಿತೇಕೆ

ಗರಿಬಿಚ್ಚಿ ಕುಣಿಯದ ನವಿಲಿಗೆ ಕಳವಳದ ಕನವರಿಕೆ
ಹಸಿರು ವನಸಿರಿ ಚಿಗಿಯುತ್ತಿಲ್ಲ ಮೌನ ಆವರಿಸಿತೇಕೆ

ಹುಣ್ಣಿಮೆ ಚಂದ್ರಗೂ ಕಾಡಾಟ ಗ್ರಹಣ ಹಿಡಿದಂತಿದೆ
ಸಂಜೆ ಸುಳಿಗಾಳಿ ಸುಳಿಯುತ್ತಿಲ್ಲ ಮೌನ ಆವರಿಸಿತೇಕೆ

ಎದೆ ಮಿಡಿತದಲೂ ಏರುಪೇರು ಭಾಸವಾಗುತ್ತಿದೆ ‘ಗಿರಿ’
ಮುನಿದಿದೆ ಮನ ಮಿಡಿಯುತ್ತಿಲ್ಲ ಮೌನ ಆವರಿಸಿತೇಕೆ

ಮಂಡಲಗಿರಿ ಪ್ರಸನ್ನ, ರಾಯಚೂರು
ಮೊ:9449140580