ಪ್ರಾರ್ಥನಾ ಸಾಹಿತ್ಯ ಪುರಸ್ಕಾರಕ್ಕಾಗಿ ಕೃತಿಗಳ ಅಹ್ವಾನ

.      ಮಾನ್ವಿ .ಡಿ.16: ಪಟ್ಟಣದ ಪ್ರಾರ್ಥನಾ ಟ್ರಸ್ಟ್ ವತಿಯಿಂದ ರಾಜ್ಯಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರಕ್ಕಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ.ಯಂಕನಗೌಡ ಬೊಮ್ಮನಹಾಳ ಹಾಗೂ ಸದಸ್ಯ ಬಸವರಾಜ ಭೋಗಾವತಿ ತಿಳಿಸಿದ್ದಾರೆ.
2020 ಹಾಗೂ 2021ರಲ್ಲಿ ಪ್ರಕಟವಾದ ಕನ್ನಡದ ಎರಡು ಕೃತಿಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುವುದು. ಅತ್ಯುತ್ತಮ ಕಥಾ ಸಂಕಲನಕ್ಕೆ ರೂ10ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ, ಅತ್ಯುತ್ತಮ ಕವನ ಸಂಕಲನಕ್ಕೆ ರೂ5ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಆಸಕ್ತರು 31ಡಿಸೆಂಬರ್ 2021ರ ಒಳಗೆ ಸ್ವವಿವರಗಳೊಂದಿಗೆ ತಮ್ಮ ಕೃತಿಯ ಮೂರು ಪ್ರತಿಗಳನ್ನು ಕಳುಹಿಸಬೇಕು. ಕೃತಿಗಳನ್ನು ಕಳುಹಿಸಬೇಕಾದ ವಿಳಾಸ : ಎಂ.ಎ.ಪಾಟೀಲ್ ವಕೀಲರು (ನಿವೃತ್ತ ಸರ್ಕಾರಿ ಅಭಿಯೋಜಕರು), ಅಮರೆಗೌಡರ ಕಾಂಪ್ಲೆಕ್ಸ್, ಮಾನ್ವಿ, ರಾಯಚೂರು ಜಿಲ್ಲೆ. ಹೆಚ್ಚಿನ ಮಾಹಿತಿಗಾಗಿ 7337754523, 9880013122 ಮೊಬೈಲ್ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.