ನಿಜವಾದ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರ ರಾಜಕೀಯ ಭವಿಷ್ಯವಾಣಿ

ಮಹಾಶೈವ ಧರ್ಮ ಪೀಠದ ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರು ನುಡಿದ ರಾಜಕೀಯ ಭವಿಷ್ಯ ನಿಜವಾಗಿದೆ. ನಿಖರವಾಗಿ ರಾಜಕೀಯ ಭವಿಷ್ಯ ಹೇಳುವ ಮುಕ್ಕಣ್ಣ ಕರಿಗಾರ ಅವರು ವಿಧಾನಪರಿಷತ್ ಚುನಾವಣೆಯಲ್ಲಿ ರಾಯಚೂರು- ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಹಾಗೂ ಗುಲ್ಬರ್ಗಾ ಯಾದಗಿರಿ ವಿಧಾನ ಸಭಾಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ನವೆಂಬರ್ 30,2021 ರಂದೇ ಭವಿಷ್ಯ ಹೇಳಿದ್ದರು.ರಾಯಚೂರಿನ ಜನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ದಂಡಪ್ಪ ಬಿರಾದರ ಅವರ ಪ್ರಶ್ನೆಗೆ ಲಿಖಿತವಾಗಿಯೂ ಉತ್ತರಿಸಿದ್ದರು.ಈಗ ಎಂ ಎಲ್ ಸಿ ಎಲೆಕ್ಷನ್ ಚುನಾವಣಾ ಫಲಿಂತಾಶ ಹೊರಬಿದ್ದಿದ್ದು ರಾಯಚೂರು ಕೊಪ್ಪಳ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಬಯ್ಯಾಪುರ ಅವರು,ಗುಲ್ಬರ್ಗಾ ವಿಧಾನ ಪರಿಷತ್ ಕ್ಷೇತ್ರದಿಂದ ಬಿ ಜಿ ಪಾಟೀಲ್ ಅವರು ಗೆದ್ದಿದ್ದಾರೆ.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರು ನಿಖರ ರಾಜಕೀಯ ಭವಿಷ್ಯ ಹೇಳುತ್ತಾರೆ ಎನ್ನುವ ಮಾತು ಮತ್ತೊಮ್ಮೆ ದೃಢಪಟ್ಟಿದೆ.

ಮುಕ್ಕಣ್ಣ ಕರಿಗಾರ ಅವರ ನಿಷ್ಠರಲ್ಲಿ ಒಬ್ಬರಾಗಿರುವ ರಘುನಂದನ್ ಪೂಜಾರಿ ಅವರು ನವೆಂಬರ್ 30 ರಂದು ರಾಯಚೂರು ಕೊಪ್ಪಳ ಅಭ್ಯರ್ಥಿಯ ಚುನಾವಣಾ ಫಲಿತಾಂಶದ ಬಗ್ಗೆ ಕೇಳಿದಾಗ ‘ ಕಾಂಗ್ರೆಸ್ ಗೆಲ್ಲುತ್ತದೆ’ ಎಂದು ಹೇಳಿದ್ದರು.ಬಳಿಕ 12.12.2021 ರಂದು ಮಸೀದಪುರದ ರಾಮಕೃಷ್ಣ ಮತ್ತು ಈರಪ್ಪ ಎನ್ನುವ ಸದ್ಭಕ್ತರಿಬ್ಬರೂ ವಿಶ್ವನಾಥ ಅವರ ಗೆಲುವಿಗೆ ಪ್ರಾರ್ಥಿಸಿದಾಗಲೂ ‘ಕಾಂಗ್ರೆಸ್ ಗೆಲ್ಲುತ್ತದೆ’ ಎಂದೇ ಹೇಳಿದ್ದರು.ಅಲ್ಲದೆ ಯಾವ ಕಾರಣಕ್ಕಾಗಿ ವಿಶ್ವನಾಥ ಸೋಲುತ್ತಾರೆ ಎಂದು ಕೂಡ ಹೇಳಿದ್ದರು.

ರಾಯಚೂರಿನ ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ದಂಡಪ್ಪ ಬಿರಾದರ ಅವರು ಚುನಾವಣಾ ಫಲಿತಾಂಶದ ಮುನ್ನಾ ದಿನವಾದ 13.12.2021 ರಂದು ಮುಕ್ಕಣ್ಣ ಕರಿಗಾರ ಅವರಿಗೆ ವಾಟ್ಸಾಪ್ ಮಾಡಿ ನಾಳೆಯ ಎಂ ಎಲ್ ಸಿ ಚುನಾವಣೆ ಫಲಿತಾಂಶದಲ್ಲಿ ರಾಯಚೂರು- ಕೊಪ್ಪಳ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಸರ್? ಎಂದು ಕೇಳಿದ್ದಕ್ಕೆ ರಾಯಚೂರು- ಕೊಪ್ಪಳದಲ್ಲಿ ಕಾಂಗ್ರೆಸ್,ಗುಲ್ಬರ್ಗಾ- ಯಾದಗಿರಿಯಲ್ಲಿ ಬಿಜೆಪಿ ಗೆಲ್ಲುತ್ತದೆ ಅಂತ ಲಿಖಿತವಾಗಿ ಉತ್ತರಿಸಿದ್ದರು.ಹೀಗೆ ನಿಖರವಾಗಿ ಲಿಖಿತವಾಗಿ ಉತ್ತರ ಕೊಡುವ ಸಾಮರ್ಥ್ಯ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಿಗೆ ಮಾತ್ರ ಸಾಧ್ಯವಾಗಬಲ್ಲುದು.ದಂಡಪ್ಪ ಬಿರಾದರ ಅವರಿಗೆ ಕಳಿಸಿದ ಉತ್ತರವನ್ನು ‘ ಶರಣಾರ್ಥಿ ಕನ್ನಡಿಗರೆ’ ಪ್ರಾದೇಶಿಕ ಪತ್ರಿಕೆಯ ಸಂಪಾದಕರಾದ ಶರಣು ಗದ್ದುಗೆ ಅವರಿಗೆ,’ ಕರುನಾಡ ವಾಣಿ’ ಆನ್ ಲೈನ್ ಪತ್ರಿಕೆಯ ಸಂಪಾದಕರಾದ ಬಸವರಾಜ ಕರೆಗಾರ ಅವರಿಗೆ ಮತ್ತು ಬಿ ಬಿ ನ್ಯೂಸ್ ಗುರು ಆನ್ ಲೈನ್ ಪತ್ರಿಕೆಯ ಸಂಪಾದಕರಾದ ಬಸವರಾಜ ಭೋಗಾವತಿ ಅವರಿಗೂ ಕಳಿಸಿದ್ದರಲ್ಲದೆ ಸಾಕಷ್ಟು ಜನರಿಗೆ ಮಾಹಿತಿ ನೀಡಿದ್ದರು.ಇದು ಮಹಾಶೈವ ಧರ್ಮಪೀಠದ ಸತ್ತ್ವ,ಸಾಮರ್ಥ್ಯಗಳನ್ನು ತೋರಿಸುತ್ತದೆ.

ಮಹಾಶೈವ ಧರ್ಮಪೀಠಕ್ಕೆ ರಾಜಕೀಯ ಭವಿಷ್ಯ ಕೇಳಿ ಸಾಕಷ್ಟು ಜನರು ಬರುತ್ತಾರೆ. ವಿಶ್ವೇಶ್ವರಿ ದುರ್ಗಾದೇವಿಯ ಸನ್ನಿಧಿಯಲ್ಲಿ ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರು ನುಡಿಯುವ ಭವಿಷ್ಯ ಹುಸಿಯಾಗುವುದಿಲ್ಲ.ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಹಾಶೈವ ಧರ್ಮಪೀಠದ ವಿಶ್ವೇಶ್ವರಿ ದುರ್ಗಾದೇವಿಯು ಪೀಠಾಧ್ಯಕ್ಷರಾದ ಮುಕ್ಕಣ್ಣ‌ ಕರಿಗಾರ ಅವರ ನಾಲಗೆಯಲ್ಲಿ ನೆಲೆಸಿ,ನುಡಿಯುವ ಮೂಲಕ ‘ ಮಾತನಾಡುವ ಮಹಾದೇವಿ’ ಎನ್ನುವ ಲೀಲೆ ಮೆರೆಯುತ್ತಿದ್ದಾಳೆ.