ಮಾನ್ವಿ: ಕಾಂಗ್ರೆಸ್ ಪಕ್ಷದ ಸದಸ್ಯತ್ವ. ನೋಂದಣಿ ಅಭಿಯಾನಕ್ಕೆ ತಾ.ಪಂ ಮಾಜಿ ಅಧ್ಯಕ್ಷ ರಾಜಾ ವಸಂತನಾಯಕ ಚಾಲನೆ

ಮಾನ್ವಿ. ಡಿ.11:  ಮಾನ್ವಿ ತಾಲೂಕಿನ ರಬ್ಬಣಕಲ್ ಗ್ರಾಮದಲ್ಲಿ ಇಂದು ಮಾನ್ವಿ ಬ್ಲಾಕ್ ಕಾಂಗ್ರೆಸ್ ಘಟಕದಿಂದ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ತಾ.ಪಂ ಮಾಜಿ ಅಧ್ಯಕ್ಷ ರಾಜಾ ವಸಂತನಾಯಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ‘ಇಂದು ರಾಜ್ಯಾದ್ಯಂತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ಬೂತ್ ಮಟ್ಟದ ಸದಸ್ಯತ್ವ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು. ಅವರು ರಬ್ಬಣಕಲ್ ಗ್ರಾಮದ ಬೂತ್ ನಂ.237ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ನೋಂದಾಯಿಸಿಕೊಂಡರು.
ಗ್ರಾಮದ ನೂರಾರು ಯುವಕರು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದರು.

ಈ ಸಂದರ್ಭದಲ್ಲಿ ಆರ್ ಬಾಲಕೃಷ್ಣ. ನರಸಿಂಹ. ಟಿ.ಬಾಲಕೃಷ್ಣ, ರೇವಣಸಿದ್ದಯ್ಯ ಸ್ವಾಮಿ. ತಾಯಪ್ಪ ನಾಯಕ, ನಾರಾಯಣ ಯಾದವ, ಜಯರಾಮ್, ಮಜೀದ್ ಮಾಲ್ದರ್.
ಬಸವರಾಜ, ಕೊಂಡಯ್ಯ ಉರುಕುಂದಪ್ಪ, ಸಾಬಯ್ಯ, ರಹಮಾನ್ ಬೇಗ, ಸೊಹೇಲ್ ಖುರೇಷಿ ಭಾಗವಹಿಸಿದ್ದರು.