ಭಾನುವಾರದ ಗಜಲ್ ಘಮಲು : ಮಂಡಲಗಿರಿ ಪ್ರಸನ್ನ

ಗಜಲ್ 

   – ಮಂಡಲಗಿರಿ ಪ್ರಸನ್ನ

ಒಂಟಿತನ ಹಿತ ಎನಿಸುವುದಾದರೆ ಅಡ್ಡಿಯಿಲ್ಲ ಬಿಡು
ಏಕಾಂತವನು ಬಯಸುವುದಾದರೆ ಅಡ್ಡಿಯಿಲ್ಲ ಬಿಡು

ಯಾವುದೋ ಕಸಿಬಿಸಿ ನಮ್ಮತನದ ಹಾದಿ ತಪ್ಪಿಸಿದೆ
ಮುಖಾಮುಖಿ ಬೇಡೆನುವುದಾದರೆ ಅಡ್ಡಿಯಿಲ್ಲ ಬಿಡು

ಅದೆಷ್ಟೋ ಖುಷಿಯ ಸಂಗತಿ ಮೌನದಲ್ಲಡಗಿವೆ ನಿಜ
ಮ್ಲಾನದಿ ಎದೆ ಹಗುರಾಗುವುದಾದರೆ ಅಡ್ಡಿಯಿಲ್ಲ ಬಿಡು

ಕತ್ತಲೆ ಹೇಗೆ ಆವರಿಸಿತು ಬೆಳಕು ತುಂಬಿದ ಕಣ್ಣುಗಳಲಿ
ಕುರುಡುತನವೆ ಸುಖವೆನುವುದಾದರೆ ಅಡ್ಡಿಯಿಲ್ಲ ಬಿಡು

ರಾತ್ರಿ ತಳಮಳದಲೆ ತಾರೆಗಳೆಣಿಸುವ ಮೋಹ ‘ಗಿರಿ’
ಚಡಪಡಿಕೆ ಬಲೆಯಲೆ ಇರುವುದಾದರೆ ಅಡ್ಡಿಯಿಲ್ಲ ಬಿಡು

ಮಂಡಲಗಿರಿ ಪ್ರಸನ್ನ, ರಾಯಚೂರು
ಮೊ:9449140580