ಕಾವ್ಯಲೋಕ: ಗುಂಡಪ್ಪ ರಾಠೋಡ್ ಅವರ ಕವನ ‘ ತಾಯಿ ಮಡಿಲು’

ತಾಯಿ ಮಡಿಲು

*ಗುಂಡಪ್ಪ ರಾಠೋಡ್

ಕತ್ತಲಿದ್ದರೂ ಸ್ವರ್ಗ ಸುಖ
ಸುತ್ತಲಿನ ಗೋಡೆಯ ಹೊದೆಯುತ್ತಾ
ನನ್ನಮ್ಮನಿಗೆ ಖುಷಿಯ ನೀಡುತ್ತಾ
ಅಪ್ಪನಿಗೊಂದಿಷ್ಟು ನೋವು ಮರೆಸುತ್ತಾ.

ಕನಸುಗಳ ಸಾಲು ಹೊತ್ತು
ಹಗಲಿರುಳೆನ್ನದೆ ಕನವರಿಸುತ್ತ
ನನ್ನಮ್ಮ ನನಗಾಗಿ ನಗುನಗುತ
ಹಡೆದಳು ನನ್ನ ನಡೆದಾಡುತ್ತಾ.

ಮಲಿನವಾದ ಪ್ರಪಂಚ
ಯಾಕೋ ನನಗೆ ಇಷ್ಟವಾಗಲಿಲ್ಲ.
ನನ್ನಮ್ಮನ ಗರ್ಭವೇ ಬೇಕೆಂದೆನು ಅಳುತ್ತಾ
ಹೊದಿಸಿದ ಹೊದಿಕೆಯನ್ನು ಮತ್ತೆ ಮತ್ತೆ ಹೊದೆಯುತ್ತಾ.

ಯಾರೇ ಬಂದು ಎತ್ತಿಕೊಂಡರೂ
ನೆಮ್ಮದಿಯ ಅನುಭವವೇ ಇರಲಿಲ್ಲ..
ಏಕೋ ಗೊತ್ತಿಲ್ಲ.
ನನ್ನಮ್ಮನ ಮಡಿಲು ಸೌಖ್ಯದ ಸಂಚಿಯಾಗಿತ್ತು.
ಅಪ್ಪನ ಕೈಗಳೆ ತೂಗು ಜೋಕಾಲಿಯಾಗಿತ್ತು.

ಗೆಜ್ಜೆ ತುಂಬಿದ ಬೆಳ್ಳಿಯ ಕಾಲ್ಗಡಗ
ಹೆಜ್ಜೆಯಿಟ್ಟಾಗಲೆಲ್ಲ ಅರಳಿತು ಮುಖ.
ಬಾಯ್ದೆರೆದು  ನಗುತ್ತಾ ಧಪ್ಪೆಂದ ಕೆಳಗೆ ಬೀಳುತ್ತಾ ಮತ್ತೆ ಏಳುತ್ತಾ.
ಅಪ್ಪನ ಹೆಗಲು ಏರುತ್ತಿದ್ದೆ.

ಗುಂಡಪ್ಪ ರಾಠೋಡ್
ಸುಂಕೇಶ್ವರ ತಾಂಡಾ
ತಾ. ಮಾನ್ವಿ
ಜಿ.ರಾಯಚೂರು
ಸಹಶಿಕ್ಷಕರು ಉ.ಸ.ಹಿ.ಪ್ರಾ ಶಾಲೆ ಪುಲದಿನ್ನಿ
ಮೊ;8105994746