ನೈತಿಕತೆ ಮತ್ತು ಅನೈತಿಕತೆಯ ಸುಳಿಯಲ್ಲಿ ಹೀಗೆ ನಾವು ನೀವೆಲ್ಲ ಕಳೆದು ಹೋಗುವ ಮುನ್ನ
ಲೇಖಕರು: ದೀಪಕ್ ಶಿಂಧೆ
ಯಾಕ್ರೀ ಬೇಕಿತ್ತು ಮುದ್ದಾದ ಮಕ್ಕಳು!ಸುಂದರವಾದ ಸಂಸಾರ! ಎನೇ ಹೇಳಿ ಆ ಹೆಂಗ್ಸು ಹಿಂಗೆ ತನ್ನ ಗಂಡನಿಗೆ ಮೋಸಾ ಮಾಡಬಾರದಿತ್ತು…ಅಯ್ಯೋ ಬಿಡಿ ಸಾರ್! ಆ ವಯ್ಯಾ ಒಂದೇ ಕಾಲನಿಯಲ್ಲಿ ಇಬ್ಬರ ಜೊತೆಗೆ ಇದ್ದಿದ್ದನ್ನ ನಾವೆ ನೋಡಿದಿವಿ,ಆ ಪುಟ್ನಂಜ ಮೊದಲನೆ ಹೆಂಡತಿ ಮಗ ಈ ಗೌರಿ ಎರಡನೆ ಹೆಂಡ್ರ ಮಗಳು…ಅಯ್ಯೋ ಮಕ್ಕಳು ಮರಿ ಏನೂ ಇರಲಿಲ್ಲ ಬಿಡಿ ಪಾಪಾ ಅದಕ್ಕೆ ಅಂತಾನೆ ಇನ್ನೊಬ್ಬರ ಜೊತೆ ಅಡ್ಜಸ್ಟಮೆಂಟು,ಎನ್ರಿ ಕಮ್ಮಿ ಇತ್ತು ಅವಳ ಗಂಡಾ ಸಾಪ್ಟವೇರ್ ಇಂಜನೀಯರು ಲಕ್ಷದ ಸಂಬಳ ಇವಳು ಡ್ರೈವರ್ ಜೊತೆಗೆ ಎಂಥಾ ಕಾಲಾ ಬಂತು ನೋಡಿ…ಥೂ…ಥೂ….ಶಾಂತಂ ಪಾಪಂ…ಶಾಂತಂ ಪಾಪಂ!!!
ಬರೀ ಇಂತಹದ್ದೆ ಮಾತುಗಳನ್ನ ಕೇಳುವ ಕಾಲಘಟ್ಟವಿದು.ವಿಧವೆಯೊಬ್ಬಳು ಇಟ್ಟುಕೊಂಡ ಸಂಭಂದ ಅಥವಾ ಉದ್ಯಮಿಯೊಬ್ಬ ಇಟ್ಟುಕೊಂಡ ಅಫೇರು,ಆಟೋದವನ ಜೊತೆಗೋ, ಕೇಬಲ್ ನವನ ಜೊತೆಗೋ ಓಡಿ ಹೋದ ಮತ್ತೊಬ್ಬರ ಮನೆಯ ಹೆಣ್ಣುಮಕ್ಕಳ ಬಗ್ಗೆ ಆಡಿಕೊಂಡು ನಗುವ ಜನರ ನಡುವೆ ನಾವೆಲ್ಲ ನಮ್ಮ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಇದ್ದೇವೆ ಅಷ್ಟೇ.ಇಲ್ಲಿ ಪ್ರಶ್ನೆ ಮೂಡುವದು ಯಾವುದು ಅನೈತಿಕ ಮತ್ತು ಯಾವುದು ನೈತಿಕ?? ಎಸ್… ಈ ಪ್ರಶ್ನೆಗೆ ಉತ್ತರ ಅವರವರ ಭಾವ ಮತ್ತು ಭಕುತಿಗೆ ಬಿಟ್ಟ ವಿಷಯವಾದರೂ ಕೂಡ ದಿಸ್ ಮ್ಯಾಟರ್ ಈಜ್ ಇಂಟರೆಸ್ಟಿಂಗ್ ಅನ್ನುವ ಕಾರಣಕ್ಕೆ ನಿಮ್ಮೊಂದಿಗೆ ಮಾತನಾಡುವ ಪುಟ್ಟ ಪ್ರಯತ್ನ ನನ್ನದು.ಈ ಜಗತ್ತಿನ ದೃಷ್ಟಿಯಲ್ಲಿ ತನ್ನ ಗಂಡನಲ್ಲದ ಅಥವಾ ಹೆಂಡತಿ ಅಲ್ಲದವರೊಂದಿಗೆ ಒಬ್ಬ ಪುರುಷ ಅಥವಾ ಮಹಿಳೆ ಇಟ್ಟುಕೊಳ್ಳುವ ದೈಹಿಕ ಅಥವಾ ಮಾನಸಿಕ ಸಂಪರ್ಕವನ್ನು ನಾವು ನೀವೆಲ್ಲ ಇಟ್ಸ ನಾಟ್ ನ್ಯಾಚುರಲ್ ಇಟ್ಸ ಇಲ್ಲೀಗಲ್ ಅಂತ ಈಜಿಯಾಗಿ ಹೇಳಿಬಿಡ್ತೀವಿ.ನಮ್ಮ ನೆಲದ ಕಾನೂನು ಕೂಡ ಅಂತಹ ಸಂಭಂಧಗಳನ್ನ ಒಪ್ಪಿಕೊಳ್ಳುವದಿಲ್ಲ ಆದರೆ ತೃತೀಯ ಲಿಂಗಿಗಳು,ಪರಸ್ಪರ ಪುರುಷರು ಅಥವಾ ಮಹಿಳೆಯರು ತಮ್ಮ ತದ್ವಿರುದ್ಧವಲ್ಲದ ಲಿಂಗಾಧಾರಿತ ವ್ಯಕ್ತಿಗಳ ಜೊತೆಗೆ ದೈಹಿಕ ಸಂಪರ್ಕ ಹೊಂದುವದನ್ನು ಕಾನೂನಿನ ಮೂಲಕ ಮಾನ್ಯ ಮಾಡುವ ಹಂತಕ್ಕೆ ಈಗಾಗಲೇ ನಾವು ನೀವೆಲ್ಲ ತಲುಪಿಯಾಗಿದೆ.ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ,ಸ್ವೇಚ್ಛೆಯ ಹೆಸರಿನಲ್ಲಿ ಕೆಲವನ್ನು ಮಾನ್ಯ ಮಾಡುವದಾದರೆ ಮುಂಬರುವ ದಿನಗಳಲ್ಲಿ ಬಹುಶಃ ಗಂಡ ಅಥವಾ ಹೆಂಡತಿಯ ಎದುರಲ್ಲೇ ಮತ್ತೊಬ್ಬರೊಂದಿಗಿನ ಒಪ್ಪಿಗೆಯ ದೈಹಿಕ ಸಂಪರ್ಕವನ್ನ ಅಧಿಕೃತಗೊಳಿಸ ಬೇಕಾಗಬಹುದು.ಇತ್ತೀಚಿನ ದಿನಗಳಲ್ಲಿ ಮುಂಬೈ,ಪೂನಾ,ಬೆಂಗಳೂರಿನಂತಹ ಮಹಾನಗರಗಳಲ್ಲಿ ಲಿವಿಂಗ್ ಟುಗೆದರ್ ಕಾಮನ್ ಅಲ್ಲವೆ?? ಅಲ್ಲಿ ಹೊಂದಾಣಿಕೆ ಆಗದೆ ಇದ್ದರೆ ಮತ್ತೊಬ್ಬರಿಗೆ ಕಾಳು ಹಾಕಿದರಾಯಿತು! ಒಂದು ಅಗ್ರಿಮೆಂಟಿಗೆ ಸಹಿ ಮಾಡಿ ಆ ಒಪ್ಪಂದ ತೀರಿದ ಬಳಿಕ ನೀವ್ಯಾರೋ ನಾನ್ಯಾರೋ ಅನ್ನುವಂತಹ ಸಂಭಂಧವದು. ಯಾವುದೋ ಒಂದು ಕಾಲಘಟ್ಟದಲ್ಲಿ ಅಥವಾ ಹರೆಯದ ಹುಮ್ಮಸಿನಲ್ಲಿ ತಮ್ಮ ಭವಿಷ್ಯವನ್ನು ಕೂಡ ಯೋಚಿಸದೆ ಪ್ರೀತಿ ಪ್ರೇಮ ಅಂತ ಒಂದು ಗಂಡು ಮತ್ತು ಒಂದು ಹೆಣ್ಣು ತಮ್ಮ ದೇಹಗಳನ್ನು ಬೆಸೆಯುವ ಮುನ್ನ,ತಮ್ಮ ಬದುಕು ಸೋತ ಕಾರಣಕ್ಕೋ,ಬ್ಯುಜಿನೆಸ್ಸು ಕೈಕೊಟ್ಟಿದ್ದಕ್ಕೋ,ಇನ್ವೆಸ್ಟಮೆಂಟ್ ಲಾಸ್ ಆಯಿತು ಅಂತಲೋ ಇಲ್ಲಾ ಷೇರ್ ಮಾರ್ಕೆಟ್ ಬಿದ್ದು ಹೋಯಿತು ಅಂತಲೋ ಮನಸ್ಸಿನ ನೆಮ್ಮದಿಗಾಗಿ,ಆತ್ಮದ ಸಂತೃಪ್ತಿಗಾಗಿ ಅಥವಾ ಆ ಕ್ಷಣಕ್ಕೆ ಉಂಟಾದ ಸಂತೋಷ ಅಥವಾ ದುಖಃಕ್ಕೆ ಅಂತ ಒಂದಷ್ಟು ನೆಪಗಳನ್ನ ಇಟ್ಟುಕೊಂಡು ಕುಡಿತ,ಸಿಗರೇಟು,ಗಾಂಜಾ,ಚರಸ್, ಅಫೀಮ್ ನಂತಹ ಚಟಗಳಿಗೆ ಎಷ್ಟೋ ಜನ ಅಷ್ಟೇ ವೇಗವಾಗಿ ಬಲಿಯಾಗುತ್ತಿದ್ದಾರೆ? ತೀರಾ ಇತ್ತೀಚೆಗೆ ಲವ್ ಮ್ಯಾರೇಜ್ ಸರಿಹೋಗದೆ ವಿವಾಹ ವಿಚ್ಚೇದನಕ್ಕೆ ಅರ್ಜಿ ಹಾಕಿದ ಹೆಂಗಸೊಬ್ಬಳು ಪರ್ಯಾಯವಾಗಿ ಹುಡುಕಿ ಕೊಳ್ಳುವ ಸಂಭಂದ,ದೇಶದ ಗಡಿ ಕಾಯುವ ಯೋಧನಿಗೆ ಗೊತ್ತಿಲ್ಲದ ಹಾಗೆ ಪಕ್ಕದ ಮನೆಯ ಅಂಕಲ್ ಜೊತೆಗೆ ನಂಟು ಬೆಳೆಸುವ ಒಬ್ಬ ದಾರಿಬಿಟ್ಟ ಮದ್ಯವಯಸ್ಕ ಹೆಂಗಸು,ಅಥವಾ ತೀರಾ ಎಪ್ಪತ್ತು ಎಂಭತ್ತನೆ ವಯಸ್ಸಿನಲ್ಲಿ ವಿಧುರ ಅಥವಾ ವಿಧವೆಯಾದ ವಯೋವೃದ್ದರು ದೈಹಿಕ ಸುಖವನ್ನೂ ಹೊರತುಪಡಿಸಿ ಅದರಾಚೆಗೆ ತಮಗಾಗಿ ಮಿಡಿಯುವ ಜೀವವೊಂದಿರಲಿ ಅನ್ನುವ ಕಾರಣಕ್ಕಾಗಿ ಸಂಗಾತಿಗಳನ್ನು ಬಯಸುತ್ತಾರೆ. ಅಷ್ಟೇ ಯಾಕೆ? ಈ ಜಗತ್ತಿನ ಯಾವುದೋ ಮೂಲೆಯಲ್ಲಿ
ನಿರ್ಗತಿಕ ಹೆಂಗಸೊಬ್ಬಳು ತನ್ನ ಅಸಹಾಯಕತೆಗಾಗಿ ಆಶ್ರಯ ಕೊಟ್ಟ ಅಪ್ಪನ ವಯಸ್ಸಿನ ಅರೆ ಮಾಸಿದ ಬೋಳು ತಲೆಯವನ ಕಾಮ ತನಿಸುವ ಅನಿವಾರ್ಯತೆಗೆ ಒಳಗಾಗುತ್ತಾಳೆ ಅನ್ನುವದಾದರೆ??
ಇಂತಹ ವಿಷಯಗಳಲ್ಲಿ ಯಾವುದು
ನೈತಿಕ ಮತ್ತು ಅನೈತಿಕ ಅನ್ನುವದನ್ನು ಯೋಚಿಸುತ್ತ ಕುಳಿತಾಗ ನಾನು ಹೇಳುವ ಮಾತು ಇಷ್ಟೇ…. ಕಾಮಾತುರಣಾಂ ನ ಭಯಂ ನ ಲಜ್ಜಾ….ಅನ್ನುವ ಇದೇ ಸಮಾಜದ ಹಣ,ಹೆಂಡ,ಹೆಂಗಸು,ಒಡವೆ ವಸ್ತ್ರ, ಮಾಡಿಟ್ಟ ಆಸ್ತಿ ಮತ್ತು ದೈಹಿಕ ಸುಖ ಇದ್ಯಾವದೂ ನಮ್ಮ ಬದುಕಿನಲ್ಲಿ ನಾವು ಉಸಿರು ಚೆಲ್ಲುವ ಕಾಲಕ್ಕೆ ನಮ್ಮ ಜೊತೆಯಾಗಿ ಬರುವದಿಲ್ಲ ಅನ್ನುವದೇ ನಮ್ಮ ಬದುಕಿನ ಕೊನೆಯ ಸತ್ಯ.
ಈ ಜಗತ್ತಿನ ಪ್ರತಿ ಜೀವಿಯ ಸಾವಿಗೂ ಒಂದಲ್ಲ ಒಂದು ಕಾರಣ ಖಂಡಿತ ಇರುತ್ತೆ. ಆದರೆ ಕೊನೆಯ ಕ್ಷಣದಲ್ಲಿ ನಮ್ಮ ಮಾನಸಿಕ ನೆಮ್ಮದಿ ಮತ್ತು ಆರೋಗ್ಯಗಳು ಹಾಳಾಗದಿರಲಿ ನಾವು ಇರುವ ಈ ಸುಂದರ ಸಮಾಜ ಒಪ್ಪದ ಸಂಭಂಧಗಳತ್ತ ನಮ್ಮ ಮನಸ್ಸು ಸುಳಿಯದಿರಲಿ,ದುಶ್ಚಟಗಳಿಗೆ ಯಾರೂ ಬಲಿಯಾಗದಿರಲಿ.ನಮ್ಮ ಹುಟ್ಟಿನಿಂದ ಹಿಡಿದು ಚಟ್ಟ ಕಟ್ಟುವ ತನಕ ಏನಿದ್ದರೂ ನಾವು ಬದುಬೇಕಿರುವದು ಇದೇ ಸಮಾಜದ ನಾಲ್ಕು ಜನರ ನಡುವೆ ಅನ್ನುವದನ್ನ ಮರೆಯಬೇಡಿ.
ಒಂದಷ್ಟು ಧ್ಯಾನ,ಆಧ್ಯಾತ್ಮ,ವಾಕಿಂಗ್,ವ್ಯಾಯಾಮ,ಜಿಮ್ಮು, ಸೈಕ್ಲಿಂಗ್ ಅಷ್ಟೇ ಏಕೆ?? ನಮ್ಮ ಮನಸಿನ ನೆಮ್ಮದಿಗಾಗಿ ನಾವು ಗುಣುಗಿಕೊಳ್ಳುವ ಹಾಡು,ಒಬ್ಬಂಟಿಯಾದಾಗ ಕೇಳುವ ಇನಸ್ಟ್ರೂಮೆಂಟ ಮ್ಯೂಜಿಕ್ ಇವೆಲ್ಲವುಗಳ ನಡುವೆ ನಮ್ಮ ನಿಮ್ಮೆಲ್ಲರ ಮನಸ್ಸು ಪ್ರಪುಲ್ಲಗೊಳ್ಳಲಿ. ಈ ಸಮಾಜ ಒಪ್ಪದ ಸಂಬಂಧಗಳನ್ನು ಬಿಟ್ಹಾಕಿ ಪಾಲಿಗೆ ಬಂದದ್ದು ಪಂಚಾಮೃತ ಅಂದುಕೊಂಡು ಸಿಗದೆ ಇರುವದರ ಬಗ್ಗೆ ಯೋಚಿಸುವದನ್ನ ನಿಲ್ಲಿಸಿಬಿಡಿ ಮೂಲತಹ ಮನುಷ್ಯ ಸಂಘ ಜೀವಿ ಆದ್ದರಿಂದ ನಾವು ನೀವೆಲ್ಲ ನಾಲ್ಕು ಗೋಡೆಯ ನಡುವೆ ಬದುಕಲು ಬೇಕಾದ ಅರ್ಹತೆಗಳು ಮತ್ತು ನಾಲ್ಕು ಜನರ ನಡುವೆ ಬದುಕಲು ಬೇಕಾದ ಅರ್ಹತೆಗಳನ್ನು ಅರಿತುಕೊಂಡು ಒಳ್ಳೆಯದನ್ನ ಆಯ್ದುಕೊಳ್ಳುತ್ತ ಕೆಟ್ಟದ್ದನ್ನು ಬಿಟ್ ಹಾಕುತ್ತ ಬದುಕಿನ ಪ್ರತಿ ಕ್ಷಣವನ್ನ ಎಂಜಾಯ್ ಮಾಡೋಣ
ಏನಂತೀರಿ??

ಪತ್ರಕರ್ತ, ಅಥಣಿ
ಮೊ:9482766018