ಕಸಾಪ ರಾಜ್ಯಾಧ್ಯಕ್ಷರಾಗಿ ಮಹೇಶ ಜೋಷಿ ಆಯ್ಕೆ: ನಿಜವಾದ ಮುಕ್ಕಣ್ಣ ಕರಿಗಾರ ಭವಿಷ್ಯ

ಮಹೇಶ ಜೋಷಿ

ಅಕ್ಟೋಬರ್ 26,2020 ರಂದೇ ನಾನು ಮಹೇಶ ಜೋಷಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆ ಆಗುತ್ತಾರೆ ಎಂದು ಹೇಳಿದ್ದೆ.

‌‌ಕನ್ನಡಿಗರ ಪ್ರಾತಿನಿಧಿಕ ಸಾಹಿತ್ಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ ನಿರೀಕ್ಷೆಯಂತೆ ಮಹೇಶ ಜೋಷಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಈ ಬಗ್ಗೆ ನಾನು 2020 ರ ಅಕ್ಟೋಬರ್ 26 ರಂದೇ ಮಹೇಶ ಜೋಷಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆ ಆಗುವುದಾಗಿ ಹೇಳಿದ್ದೆ.ಕೊವಿಡ್ ಮತ್ತಿತರ ಕಾರಣಗಳಿಂದ ಮುಂದೂಡಲ್ಪಟ್ಟರೂ ಕೊನೆಗೂ ನಿನ್ನೆ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಮಹೇಶ ಜೋಷಿ ಅವರು ಆಯ್ಕೆ ಆಗಿದ್ದಾರೆ.ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆಗಳು. ಕಳೆಗುಂದಿದ್ದ ಕನ್ನಡ ಸಾಹಿತ್ಯ ಪರಿಷತ್ತು ಅವರ ಅವಧಿಯಲ್ಲಾದರೂ ನಿಜವಾದ ಅರ್ಥದಲ್ಲಿ ಕನ್ನಡಿಗರ ಪ್ರಾತಿನಿಧಿಕ ಸಾಹಿತ್ಯ ಪರಿಷತ್ತು ಆಗಲಿ ಎಂದು ಆಶಿಸುವೆ.

ನನ್ನ ಆತ್ಮೀಯರೂ ಮಹಾಶೈವ ಧರ್ಮಪೀಠದ ನಿಷ್ಠಾವಂತರೂ ಆಗಿರುವ ಮಾನ್ವಿಯ ಪ್ರಗತಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ ಭೋಗಾವತಿ ಅವರು 2020-21 ರಲ್ಲಿ ನಡೆಯಬೇಕಿದ್ದ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿ ವಿಶ್ವೇಶ್ವರಿ ದುರ್ಗಾದೇವಿಯ ಆಶೀರ್ವಾದ ಬಯಸಿ ಕುಟುಂಬ ಸಮೇತರಾಗಿ ಬಂದಿದ್ದರು ಮಹಾಶೈವ ಧರ್ಮಪೀಠಕ್ಕೆ 2020 ರ ಅಕ್ಟೋಬರ್ 26 ರಂದು ನನ್ನ ನವರಾತ್ರಿ ಅನುಷ್ಠಾನ ಸಮಾಪ್ತಿಯ ದಿನದಂದು.ತಾಯಿ ದುರ್ಗಾದೇವಿಯ ಅನುಗ್ರಹವನ್ನು ಅವರಿಗೆ ಕರುಣಿಸುತ್ತ ಮಹೇಶ ಜೋಷಿ ಅವರ ಬಣದೊಂದಿಗೆ ಗುರುತಿಸಿಕೊಳ್ಳಿ,ಅವರು ಗೆಲ್ಲುತ್ತಾರೆ ಎಂದು ಹೇಳಿದ್ದೆ.ಬಸವರಾಜ ಭೋಗಾವತಿ ಅವರು ಸ್ಪರ್ಧಿಸಲು ಪ್ರಯತ್ನಿಸಿದರಾದರೂ ಅವರು ಮಾನ್ವಿ ತಾಲೂಕಿನ ವರದಿಗಾರರಾಗಿದ್ದ ‘ಪ್ರಜಾವಾಣಿ’ ಪತ್ರಿಕೆಯ ಸಂಪಾದಕ ಮಂಡಳಿ ಅನುಮತಿ ನೀಡಲಿಲ್ಲವಾದ್ದರಿಂದ ಅನಿವಾರ್ಯವಾಗಿ ಅವರು ಸ್ಪರ್ಧೆಯಿಂದ ಹಿಂದೆ ಸರಿದರು.ಆದರೂ ನಿನ್ನೆ ನಡೆದ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಬಸವರಾಜ ಭೋಗಾವತಿ ಅವರು ಮತ್ತು ಅವರ ಗೆಳೆಯರು ಬೆಂಬಲಿಸಿದ ಅಭ್ಯರ್ಥಿ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎನ್ನುವುದು ಗಮನಾರ್ಹ.

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ನೆಲೆಗೊಂಡು ಲೋಕಾನುಗ್ರಹವನ್ನುಂಟು ಮಾಡುತ್ತಿರುವ ಶ್ರೀ ವಿಶ್ವೇಶ್ವರಿ ದುರ್ಗಾದೇವಿಯು ‘ ವಿಜಯ ದುರ್ಗೆ’ ಯೂ ಅಹುದು.ತನ್ನನ್ನು ಆಶ್ರಯಿಸಿ ಬಂದವರಿಗೆಲ್ಲ ವಿಜಯದ ಖಚಿತ ಭರವಸೆ ನೀಡಿ ಗೆಲ್ಲಿಸಿದ್ದಾಳೆ.

ಮುಕ್ಕಣ್ಣ ಕರಿಗಾರ
ಮೊ: 94808 79501